December 13, 2025
unnamed.jpg

ಚಳ್ಳಕೆರೆ ಡಿ.1ಇಬ್ಬರು ಗರ್ಭಿಣಿಯರನ್ನು ಒಂದೇ ತುರ್ತು ವಾಹನದಲ್ಲಿ ಜಿಲ್ಲಾಸ್ಪತ್ರೆ ಕಳಿಸಿದ ಘಟನೆ ನಡೆದಿದೆ.

ಹೌದು ಇದು ಚಳ್ಳಕೆರೆ ನಗರದ ಸರಕಾರಿ ಮಹಿಳ ಮತ್ತು ಮಕ್ಕಳ ಆಸ್ಪತ್ರೆಗೆ ಭಾನುವಾರ ರಾತ್ರಿ ವಿವಿಧ ಗ್ರಾಮಗಳಿಂದ ಆಶಾ ಕಾರ್ಯರ್ತೆಯರು ಹೆರಿಗೆಗಾಗಿ ಕರೆದು ಕೊಂಡು ಬಂದ ತುಂಬು ಗರ್ಭಿಣಿಯರಿ ವೈದ್ಯರು ರಜೆಯಲ್ಲಿದ್ದಾರೆ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಒಂದೇ ತುರ್ತುವಾಹನದಲ್ಲಿ ಇಬ್ಬರ‌ನ್ನು ಜಿಲ್ಲಾ ಆಸ್ಪತ್ರೆ ಕಳಿಸಿದರೆ ರಾತ್ರಿ ಹೆರಿಗೆ ಬಂದ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಕಳಿಸಿದರೆ.ಭಾನುವಾರ ರಾತ್ರಿ 8 ಗಂಟೆಗೆ ಬಂದ ಗ ರ್ಭಿಣಿಯನ್ನು 12ಗಂಟೆಯವರಿಗೆ ದಾಖಲು ಮಾಡಿಕೊಂಡು ನಂತರ ಪರಿಶೀಲನೆ ಮಾಡಿ ಮಗುವಿನ ಪಲ್ಸ್ ರೇಟ್ ಜಾಸ್ತಿಇದೆ ಮಗುವಿಗೆ ಸಮಸ್ಯೆಯಾಗಬಹುದು ಚಿತ್ರದುರ್ಗಕ್ಕೆ ಎಂದು ಹೇಳಿದ್ದಾರೆ.
ತಕ್ಷಣ ಪರಿಚವಿದ್ದ ಖಾಸಗಿ ನರ್ಸಿಂಗ್ ಹೋಂ ವೈದ್ಯರನ್ನು ರಾತ್ರಿ 12 ಗಂಟೆಗೆ ಕರೆದುಕೊಂಡು ಹೋದಾಗ ಗರ್ಭಿಣಿಯನ್ನು ತಪಾಸಣೆ ಮಾಡಿದಾಗ ಎಲ್ಲಾ ನಾರ್ಮಲ್ ಇದೆ ಯಾವುದೇಸಮಸ್ಯೆ ಇಲ್ಲ ಮಗು ತೂಕ ಜಸ್ತಿ ಇದೆ ಸ್ವಲ್ಪ ವಿಳಂಭವಾಗ ಬಹುದು ಗರ್ಭಿಣಿ ಕುಳ್ಳಾಗಿರುವುದರಿಂದ ನಾರ್ಮಲ್ ಹೆರಿಗೆ ಮಾಡಿಸಲು ಸ್ವಲ್ಪ ಕಷ್ಟವಾಗ ಬಹುದು ಎಂದು ಖಾಸಗಿ ಆಸ್ಪತ್ರೆ ವೈದ್ಯರು ಸಲಹೆ ನೀಡಿದರು ತಾಯಿ ಮಗು ಆರೋಗ್ಯ ಮುಖ್ಯ ಸೀಜರಿನ್ ಮಾಡಿ ಎಂದಾಗ ದಾಖಲಿಸಿ ಕೊಂಡ ಅರ್ದಗಂಟೆಯಲ್ಲೇ ಸೀಜರಿನ್ ಹೆರಿಗೆ ಮಾಡಿ ತಾಯಿ ಮಗು ಸುರಕ್ಷಿತವಾಗಿ ವಾರ್ಡ್ ಗೆ ಸ್ಥಳಾಂತರಿಸಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಪ್ರಾಂಭದ ತಿಂಗಳಿಂದ ಹೆರಿಗೆ ಸನಯದವರೆಗೆ ನೋಡುತ್ತಾರೆ ಇನ್ನೇನು ಹೆರಿಗೆ ಸನಯದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರು ಕೈ ಚೆಲ್ಲುತ್ತಾರೆ ಆದ್ದರಿಂದಲೇ ಖಾಸಗಿ ನರ್ಸಿಂಗ್ ಹೋ‌ಂ ಗಳತ್ತ ಹೆರಿಗೆಗೆ ಮುಖ ಮಾಡುವುದು ಅನಿವಾರ್ಯವಾಗಿದೆ.
ಎಲ್ಲಾ ತಾಲೂಕು ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗೆ ಹೆರಿಗೆ ಗಳಿಗೆ ಕಳಿಸುತ್ತಿರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮಗುವಿಗೆ ಹಾಸಿಗೆ ಸಿಗದೆ ನೆಲದ ಮೇಲೆ ಮಲಗುವ ದೃಶ್ಯಗಳನ್ನು ಕಾಣ ಬಹುದಾಗಿದೆ.
ಹೆರಿಗೆ ವಿಷಯದಲ್ಲಿ ಸರಕಾರಿ ಆಸ್ಪತ್ರೆಗಳನ್ನು ನಂಬಿಕೊಳ್ಳದೆ ಸಾಲ ಸೂಲ ಅಥವಾ ಒಡವೆ ಒತ್ತೆಯಿಟ್ಟು ಹಣ ತೆಗೆದುಕೊಂಡು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ಮಾಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಇತ್ತ ಕ್ಷೇತ್ರದ ಶಾಸಕರೇ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಸಾರ್ವಜನಿಕ ಆಸ್ಪತ್ರೆ. ರಸ್ತೆ .ಶಾಲಾ ಕಾಲೇಜ್. ಸರಕಾರಿ ಕಚೇರಿಗಳ ಹೈಟೆಕ್ ಕಟ್ಟಡಗಳನ್ನು ಕಟ್ಟಿ ಅಭಿವೃದ್ಧಿ ಹರಿಕಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಆದರೆ‌ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಾಲ ಸೂಲ ಮಾಡಿಕೊಂಡು ಖಾಸಗಿ‌ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಅನಿವಾರ್ಯವಾಗಿದೆ.
ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಹೆರಿಗೆ ಮತ್ತಯ ಪ್ರಸೂತಿ ತಜ್ಞರಲ್ಲಿ ಒಬ್ಬರು ವರ್ಗಾವಣೆಯಾಗಿ ಸುಮಾರು 6 ತಿಂಗಳು ಕಳೆದಿದೆ. ಅರವಳಿಕೆ ತಜ್ಞರಿಲ್ಲಿದೆ ಸುಮಾರು 2 ವರ್ಷಗಳೇ ಕಳೆದಿವೆ ಶಸ್ತ್ರಚಿಕಿತ್ಸೆ .ಕಣ್ಣಿನ ವೈದ್ಯರಿಲ್ಲ ನೆಗಡೆ .ಜ್ವರದಂತ ಖಾಯಿಲೆಗೆ ಯಾರೂ ಬೇಕಾದರೂ ಚಿಕಿತ್ಸೆ ನೀಡುತ್ತಾರೆ ಆದರೆ ಹೆರಿಗೆ ಅಂದಾಗ ಬೇರೆಯವರು ಮಾಡಿಸಲು ಬರುವುದಿಲ್ಲ ಇರುವ ಒಬ್ಬ ವೈದ್ಯರು ರಜೆ ಹಾಕಿದರೆ ಬೇರೆಯವರನ್ನು ನಿಯೋಜನೆ ಮಾಡ ಬೇಕು. ಹೆರೆಗೆ ಮಾಡಿಸಲು ಅರವಳಿಕೆ ತಜ್ಞ. ಮಕ್ಕಳ ವೈದ್ಯ. ಪಿಜಿಷನ್ .ಹಾಗೂ ಹೆರಿಗೆ ವೈದ್ಯರು ಇರಲೇ ಬೇಕು ರಾತ್ರಿ ಪಾಳಿಯಲ್ಲಿ ನರ್ಸ್ ಗಳೆ ಹೆರಿಗೆ ಮಾಡಿಸುತ್ತಾರೆ ನಾರ್ಮಲ್ ಒ ಕೆ ಸೀಜರಿನ್ ಮಾಡಿಸಲು ಅಗತ್ಯ ವೈದ್ಯರಿಲ್ಲದೆ ಜಿಲ್ಲಾ ಆಸ್ಪತ್ರೆಗೆ ಸಾಗಿಸುತ್ತಾರೆ.
ತಾಯಿ ಮಗುವಿನ ಜೀವದ ಜತೆ ಚೆಲ್ಲಾಟ ಬಿಟ್ಟು ಕೂಡಲೆ ಅಗತ್ಯ ವೈದ್ಯರ ನೇಮಕ ಮಾಡ ಬೇಕು ಸೆಕಾರಿ ಆಸ್ಪತ್ರೆಗಳು ಬಡವರ ಪಾಲಿಗೆ ವರದಾನವಾಗುವಂತೆ ಮಾಡುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading