ನಾಯಕನಹಟ್ಟಿ : ಹೋಬಳಿಯ ಕುಂದಾಪುರ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಮಹಾಪರಿನಿಬ್ಬಾಣ ಹೊಂದಿದ ದಿನದ ಪುಣ್ಯ ಸ್ಮರಣೆ ಹಾಗೂ ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಜಿ ಬಿ ಉಮೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಬಹುಜನ ನಾಯಕ ಜೈ ಭೀಮ್ ಸಿಂಗಂ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಕುದಾಪುರ ಗ್ರಾಮದಲ್ಲಿ ದಿನಾಂಕ: 5.12.2024 ರಿಂದ 10.12.2024 ವರೆಗೆ ಹಮ್ಮಿಕೊಂಡಿರುವ ಚಿತ್ರದುರ್ಗ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಕ್ರಿಕೆಟ್ ಆಟಗಾರರು,ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿ ಕ್ರೀಡೆಯನ್ನು ಯಶಸ್ವಿಗೊಳಿಸುವಂತೆ ಭೈರವ ಲಿಂಗೇಶ್ವರ ಗೆಳೆಯರ ಬಳಗ ಮತ್ತು ಕುದಾಪುರ ಸಮಸ್ತ ಗ್ರಾಮಸ್ಥರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಈ ಕೆಳಕಂಡ ನಂಬರ್ ಗಳನ್ನು ಸಂಪರ್ಕಿಸಿ : 6364340706,9620932316,9686987813,9743699535.