ಹಿರಿಯೂರು :
ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಸಾಹಿತಿಗಳಾದ ಕುವೆಂಪು, ಬಿ.ಎಂ.ಶ್ರೀಕಂಠಯ್ಯ, ಶಿವರಾಮ್ ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅ.ನ.ಕೃಷ್ಣರಾಯರು ಸೇರಿದಂತೆ ಅನೇಕ ಗಣ್ಯರು ಜೀವನವಿಡೀ ಹೋರಾಡಿದ್ದು, ಅವರ ಹೋರಾಟದ ಫಲವಾಗಿ ಕನ್ನಡನಾಡು ರಚನೆಯಾಗಿದೆ, ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಅವರು ಮಾತನಾಡಿದರು.ಲ
ಕನ್ನಡನಾಡು ಸುಮಾರು 2 ಸಾವಿರ ವರ್ಷಗಳ ಪ್ರಾಚೀನ ಪರಂಪರೆ ಹೊಂದಿದ್ದು, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪ್ರಕೃತಿ, ಪರಿಸರ, ಭಾಷೆ, ಬರಹ ಧರ್ಮ ಇವೆಲ್ಲವುಗಳಲ್ಲಿ ಮಹತ್ತರವಾದ ಒಲವು-ಚೆಲುವುಗಳನ್ನು ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ, ಕರುನಾಡಿನ ನಾಡಹಬ್ಬವಾರ ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ನವಂಬರ್ 1ರಂದು ಆಚರಿಸಲಾಗುತ್ತದೆ ಎಂದರಲ್ಲದೆ,
ರಾಜ್ಯ ಸರ್ಕಾರವು ಕನ್ನಡನಾಡು-ನುಡಿ,ಕಲೆ, ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧವಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ಪುಸ್ತಕ ಮಾರಾಟ ಮೇಳಗಳ ಮೂಲಕ ಸಾಹಿತಿಗಳ ಸಾಹಿತ್ಯವನ್ನು ಸರ್ವರಿಗೂ ತಿಳಿಸುವ ನಿಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಪುಸ್ತುಕಗಳನ್ನು ಮಾರಾಟ ಮಾಡುವುದರ ಜೊತೆಗೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ,ಹೂ, ಕೊಡುಗೆಗಳ ಬದಲಾಗಿ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಡಲಾಗುತ್ತಿದೆ,
ಅಲ್ಲದೆ ರಾಜ್ಯೋತ್ಸವದ ದಿನ ಕನ್ನಡನಾಡು, ನುಡಿ, ಭಾಷೆ, ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸಲಾಗುತ್ತಿದೆ, ಕನ್ನಡನಾಡಿನ ಭಾಷೆ, ನೆಲ, ಜಲ, ಹಾಗೂ ಕನ್ನಡ ಭಾಷೆಗೆ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ, ಕಲಾವಿದರಿಗೆ ಸಂಭಾವನೆ, ಪಿಂಚಣಿ ನೀಡಿ ಗೌರವಿಸಲಾಗುತ್ತಿದೆ, ಕನ್ನಡ ನಾಡು-ನುಡಿಯ ರಕ್ಷಣೆಗೆ ಸರ್ಕಾರದ ಸಂಪೂರ್ಣ ಸಹಕಾರವಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ನಾಡು-ನುಡಿ, ಭಾಷೆ ಮತ್ತು ಸಾಹಿತ್ಯ, ಸಂಗೀತ, ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ವಿವಿಧ ಸಾಧಕರುಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾಯಕ್ರಮದಲ್ಲಿ ತಹಶೀಲ್ದಾರ್ ಸಿದ್ದೇಶ್, ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಪೋಲೀಸ್ ಉಪಅಧೀಕ್ಷಕರಾದ ಶಿವಕುಮಾರ್, ಸಿಪಿಐರಾಘವೇಂದ್ರಕಾಂಡಿಕೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಪ್ರಮೋದ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಮಕೃಷ್ಣಪ್ಪ, ಗೌರವಾಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ದಾದಾಪೀರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಡಿ.ಸಣ್ಣಪ್ಪ, ಎ.ವಿಠ್ಠಲ್, ಶ್ರೀಮತಿ ರತ್ನಮ್ಮ, ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ.ಕೃಷ್ಣಮೂರ್ತಿ, ಕರವೇ ಕೃಷ್ಣಮೂರ್ತಿ, ರೈತ ಮುಖಂಡರುಗಳಾದ ಕೆ.ಸಿ.ಹೊರಕೇರಪ್ಪ, ಕೆ.ಟಿ.ತಿಪ್ಪೇಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಿವರಂಜಿನಿ ಯಾದವ್, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಶಿವಕುಮಾರ್, ಶ್ರೀಮತಿ ಅಂಬಿಕಾಆರಾಧ್ಯ, ಶ್ರೀಮತಿ ವಿಶಾಲಾಕ್ಷಮ್ಮ, ಶ್ರೀಮತಿ ಕವಿತಾ, ಶ್ರೀಮತಿ ಸುರೇಖಾಮಣಿ, ಶ್ರೀಮತಿ ಮೊದಲಮೇರಿ, ಶ್ರೀಮತಿ ದೇವಿರಮ್ಮ, ಕನ್ನಡ ಹಿತರಕ್ಷಣಾ ಸೇನೆ ಅಧ್ಯಕ್ಷ ಬಸವರಾಜ್, ಮಹಿಳಾ ಘಟಕದ ಶ್ರೀಮತಿಸರಸ್ವತಿನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಶಿಕ್ಷಣ ಇಲಾಖೆ ಟಿ.ಪಿ.ಓ ರವೀಂದ್ರನಾಯ್ಕ್, ಇ.ಸಿ.ಓ ಗಳಾದ ಶಿವಾನಂದ್, ನಾಗರಾಜ್, ಪುಟ್ಟಸ್ವಾಮಿ, ರಂಗಸ್ವಾಮಿ, ಕಂದಾಯ ಇಲಾಖೆ ಶ್ರೀನಿವಾಸ್ ಮೂರ್ತಿ, ಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭದಲ್ಲಿ ಶಿಕ್ಷಣ ಸಂಯೋಜಕ ಶಿವಾನಂದ್ ಕಾರ್ಯಕ್ರಮಕ್ಕೆ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಸೇವಾದಳ ಪ್ರತಿನಿಧಿ ಶಶಿಧರ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆಯನ್ನು ನೆರವೇರಿಸಿದರು. ನಗರದ ವಿವಿಧ ಪ್ರೌಢಶಾಲೆಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
About The Author
Discover more from JANADHWANI NEWS
Subscribe to get the latest posts sent to your email.