December 14, 2025
IMG-20251031-WA0252.jpg

ನಾಯಕನಹಟ್ಟಿ:-ಹೋಬಳಿಯ ಭೀಮನಕೆರೆ ಗ್ರಾಮದಲ್ಲಿ ಶುಕ್ರವಾರದಂದು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಕಳಶ ಸ್ಥಾಪನೆ ಹಾಗೂ ಕರಿಕಲ್ಲು ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಚಿತ್ರದುರ್ಗ ಸಂಸದರಾದ ಗೋವಿಂದ ಎಂ. ಕಾರಜೋಳ ಉದ್ಘಾಟಿಸಿದರು, ಈ ವೇಳೆ ಮಾತನಾಡಿದ ಅವರು,ಊರಿಗೆ ಒಳಿತಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ದೇವಸ್ಥಾನ ನಿರ್ಮಾಣ ಮಾಡಿ ಭಕ್ತಿ ಭಾವ ಮೆರೆಯುತ್ತಿರುವುದು ಸಂತಸದಾಯಕ. ಸ್ವಾತಂತ್ರದ ನಂತರ 1952 ರಲ್ಲಿ ಮೀಸಲಾತಿ ಜಾರಿಗೆ ಬಂದಿತು.ಆಗ ಆರು ಜಾತಿಗಳಿಗೆ ಮಾತ್ರ ಮೀಸಲಾಗಿದ್ದ ಮೀಸಲಾತಿ ಇಂದು 101 ಜಾತಿಗಳು ಸೇರ್ಪಡೆಯಾಗಿವೆ.60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಸರ್ಕಾರ 95 ಜಾತಿಗಳನ್ನು ಸೇರಿಸಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದೆ,ಮಾದಿಗ ಸಮುದಾಯದವರು ಅಭಿವೃದ್ಧಿಯಾಗುತ್ತಾರೆ ಎನ್ನುವ ದೃಷ್ಟಿಯಿಂದ ಈ ರೀತಿ ಅನ್ಯಾಯ ಮಾಡಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ 35 ವರ್ಷಗಳ ನಿರಂತರ ಹೋರಾಟ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛಾಶಕ್ತಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ಒಳಮೀಸಲಾತಿಗೆ ಆದೇಶ ಸಿಕ್ಕು ಒಂದು ವರ್ಷ ಮೂರು ತಿಂಗಳು ಆಗಿದೆ ಆದರೂ ಕೂಡ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮೀಸಲಾತಿ ಸಮರ್ಪಕವಾಗಿ ಜಾರಿ ತರದೇ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೇ ಎಂದು ಕಿಡಿ ಕಾರಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಚಾಮುಂಡಿ ದುರ್ಗೆ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ,ದೇಶದ ನಾನಾ ಭಾಗಗಳಲ್ಲಿ ದುರ್ಗೆಯನ್ನು ಆರಾಧನೆ ಮಾಡುತ್ತಾರೆ. ಗ್ರಾಮಗಳಿಗೆ ಮಳೆ, ಬೆಳೆ,ನೀರು ಆರೋಗ್ಯ ಮತ್ತು ಜನರು ಸುಭಿಕ್ಷವಾಗಲಿ, ಕುಟುಂಬಗಳಿಗೆ ಶ್ರೀರಕ್ಷೆ ಸಿಗಲಿ ಎನ್ನುವ ದೃಷ್ಟಿಯಿಂದ ದೇವಿಯನ್ನು ಆರಾಧನೆ ಮಾಡುತ್ತಾರೆ.ದಲಿತ ಸಮುದಾಯದವರು ಪ್ರಮುಖವಾಗಿ ಗ್ರಾಮ ದೇವತೆಯನ್ನು ಆರಾಧನೆ ಮಾಡುತ್ತಾರೆ. ನಮ್ಮ ಹುಟ್ಟಿನ ನಂತರ ನಮ್ಮ ಬೆಳವಣಿಗೆ ಆರಂಭಗೊಳ್ಳಲಿದೆ ಹಾಗಾಗಿ ಪ್ರತಿಯೊಬ್ಬರೂ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಪ್ರಬುದ್ಧರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರ್ ಸ್ವಾಮಿ, ಮುಖಂಡರಾದ ಎ.ಮುರುಳಿ,ಜಿ ಎಚ್ ಮೋಹನ್, ತಾಪಂ ಮಾಜಿ ಸದಸ್ಯ ಸಮರ್ಥ, ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗಾನ್ನಹಳ್ಳಿ ಮಲ್ಲೇಶ್, ಗುತ್ತಿಗೆದಾರ ರಮೇಶ್ ಬಾಬು, ಎಂ.ವೈ. ಟಿ. ಸ್ವಾಮಿ, ವಕೀಲ ಹಿರೇಹಳ್ಳಿ ಮಲ್ಲೇಶ್,ಡಿ.ಒ. ಮುರಾರ್ಜಿ, ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ನೇರಲಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಮನಿ ಸದಸ್ಯರಾದ ಶಾಂತಮ್ಮ ರಮೇಶ್ ಬಾಬು, ದುರುಗಮ್ಮ ನಾಗಭೂಷಣ್, ಜಿ ಎಂ ಗಿಡ್ಡಯ್ಯ, ಗೌರಣ್ಣ, ಚನ್ನಕೇಶವ, ಮತ್ತು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗೋವಿಂದಪ್ಪ, ನಾಯಕನಹಟ್ಟಿ ಮಂಡಲ ಉಪಾಧ್ಯಕ್ಷ ಜೆಸಿಬಿ ಎನ್ ತಿಪ್ಪೇಸ್ವಾಮಿ, ಎಸ್ ಸಿ ಮೋರ್ಚಾ ಅಧ್ಯಕ್ಷ ಹಾಗೂ ಅಬ್ಬೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ. ಶಂಕರಸ್ವಾಮಿ, ನಗರ ಘಟಕ ಅಧ್ಯಕ್ಷ ಜಾಗನೂರಹಟ್ಟಿ ನಾಗರಾಜ್, ಅಬ್ಬೇನಹಳ್ಳಿ ಎಂ.ಎಸ್ ಶಿವಪ್ರಕಾಶ್, ಮಂಡಲ ಮಹಿಳಾ ಅಧ್ಯಕ್ಷ ಪವಿತ್ರ ತಿಪ್ಪೇಸ್ವಾಮಿ, ಮರಿ ಪಾಲಯ್ಯ, ಕೆ.ಟಿ. ಮಂಜಣ್ಣ, ಕಾಟವ್ವನಹಳ್ಳಿ ಸುರೇಶ್ ,ಗ್ರಾಮಸ್ಥರಾದ ನಿಂಗರಾಜ್ ತಿಪ್ಪೇಸ್ವಾಮಿ ಗೌರಣ್ಣ ನಾಗಭೂಷಣ್ ದುರುಗೇಶ್, ಕರೆ ಮಾರಣ್ಣ, ತಿಮ್ಮಣ್ಣ ,ರಮೇಶ್, ಶಾಂತ,ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading