January 29, 2026
IMG-20241101-WA0186.jpg

ಚಳ್ಳಕೆರೆ ನ.1

ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜತೆಗೆ ಅನ್ಯಭಾಷೆಯನ್ನು ಕಲಿಯಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶಾಲ ಕರ್ನಾಟಕ ರಚನೆಗಾಗಿ ಕನ್ನಡ ನಾಡುನುಡಿ ಅಭಿವೃದ್ಧಿಗಾಗಿ ಅನೇಕರು ಶ್ರಮಿಸಿದ್ದಾರೆ. ಪರಕೀಯರು ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಅಖಂಡ ಭಾರತವನ್ನು ಹರಿದು ಹಂಚಿ ಹಲವಾರು ಪ್ರಾಂತ್ಯಗಳನ್ನಾಗಿ ಮಾಡಿಕೊಂಡು ತಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆದರು ಇದನ್ನು ಮನಗಂಡ ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ತಹಸೀಲ್ದಾರ್ ರೇಹಾನ್ ಪಾಷ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಿಇಒ ಸುರೇಶ್ .ಕ.ಸಾ.ಪ ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಪ್ಪ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಜಯತುಂಬಿ.ಉಪಾಧ್ಯಕ್ಷೆ ಸುಜಾತ. ನಗರಸಭೆ ಸದಸ್ಯರು. ತಾಪಂ ಇಒ ಶಶಿಧರ್ ಪೌರಾಯುಕ್ತ ಜಗ್ಗರೆಡ್ಡಿ. ಪಿ ಐ ದೇಸಾಯಿ.ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ.ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು‌ ವಿವಿಧ ಕನ್ನಡ ಪರ ಸಂಘಟನೆಗಳು

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸನ್ಮಾನಿಸಿ ಗೌರವಿಸಿದರು.
ತಾಲೂಕು ಮುಂದೆ ದ್ವಜಾರೋಹಣ ನೆರವೇರಿ ನಂತರ ವೇದಿಕೆಯತ್ತಮೆರವಣಿಗೆಯೊಂದಿಗೆ ಆಗಮಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading