December 15, 2025
IMG-20241101-WA0398.jpg

ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ-ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೆ ನೀಡಬೇಕು ಎಂದು ನಿಕಟ ಪೂರ್ವ ತಹಶೀಲ್ದಾರ್ ಎನ್.
ರಘುಮೂರ್ತಿ ಹೇಳಿದ್ದಾರೆ.

ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದರು.

ದಶಕಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಅನ್ಯಭಾಷೆಯನ್ನು ಕಲಿಯಬೇಕೆಂದು ಪರಕೀಯರು ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಅಖಂಡ ಭಾರತವನ್ನು ಹರಿದು ಹಂಚಿ ಹಲವಾರು ಪ್ರಾಂತ್ಯಗಳನ್ನಾಗಿ ಮಾಡಿಕೊಂಡು ತಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆದರು ಇದನ್ನು ಮನಗಂಡ ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಸಾಧ್ಯವಾಯಿತು ಎಂದರು.

ಗೌರವ ಅಧ್ಯಕ್ಷ ಡಿ.ನಾಗಪ್ಪ ಮಾತನಾಡಿ ಕನ್ನಡ ನೆಲ,ಜಲ, ಭಾಷೆಗೆ ಒತ್ತು ನೀಡಬೇಕು, ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿ ಮುಗ್ಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮ ಫಲಕರಗಳನ್ನು ಹಾಕಬೇಕು, ಪ್ರತಿಯೊಬ್ಬರ ಮನೆ ಮನಗಳಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬದ ವಾತಾವರಣ ನಿರ್ಮಿಸುವಂತಾಗ ಬೇಕು ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ನಡೆಸುವಂತೆ ಆಗಬೇಕು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ದಯಾನಂದ ಪ್ರಹ್ಲಾದ ಮಾತನಾಡಿ, ಈಗಿನ‌ ಯುವ ಪೀಳಿಗೆ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವಂತಹ ಕೆಲಸ ಮಾಡಬೇಕು, ಕೇವಲ ಕನ್ನಡದವನ್ನು ಕಥೆ ಕವನ ಕಾದಂಬರಿ ಮೂಲಕ ಬೆಳೆಸಿದರೆ ಸಲಾದು ಅದನ್ನು ಬಳಕೆ ಮಾಡಬೇಕು ಆಗ ಮಾತ್ರ ಕನ್ನಡ ಉಳಿಯುವುದು, ಕನ್ನಡ ಕೇವಲ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗದೆ ನಿರಂತರವಾಗಿ ಕನ್ನಡ ಎಲ್ಲಾರ ಮನೆ ಮಾತಗಲಿ ಎಂದು ಶುಭಾ ಕೋರಿದರು.

ಇದೇ ಸಂಧರ್ಭದಲ್ಲಿ ಗೌರವ ಅಧ್ಯಕ್ಷ ಡಿ.ನಾಗಪ್ಪ, ಸಂಸ್ಥೆಯ ಕಾರ್ಯದರ್ಶಿ ದಯಾನಂದ ಪ್ರಹ್ಲಾದ್, ಸಂಸ್ಥೆಯ ನಿರ್ದೇಶಕ ಡಿ.ಎನ್.ಶಿವಪ್ರಸಾದ್, ಡಿ.ಎನ್.ಮಧುಸೂದನ್, ಮುಖ್ಯ ಶಿಕ್ಷಕ ಡಿವಿ.ಪ್ರಸಾದ್, ಆಡಳಿತ ಅಧಿಕಾರಿ ಮಹಾದೇವಪ್ಪ, ಶಿಕ್ಷಕಿ ಶೈಲಜಾ, ಮಾಲಿನಿ, ಪ್ರೀಯಾಅರ್ಜುನ್, ಅನಿತಾ, ಶಿಲ್ಪ, ಹಾಗೂ ಇನ್ನಿತರೆ ಶಿಕ್ಷಕರು ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading