ನಾಯಕನಹಟ್ಟಿ : ಪಟ್ಟಣದ ಸಮೀಪದಲ್ಲಿ ಸೇತುವೆ ಕಿತ್ತು ಹೋಗಿ ಸುಮಾರು ದಿನಗಳು ಕಳೆದಿವೆ. ಆದರೂ ಅಧಿಕಾರಿಗಳು ಇತ್ತ ಕಡೆ ತಿರುಗಿ ನೋಡಿಲ್ಲವೆಂದು ಗ್ರಾಮಸ್ಥ ಪಾಲಾಕ್ಷಪ್ಪ ಆರೋಪಿಸಿದರು.
ನಂತರ ಮಾತನಾಡಿದ ಅವರು ಮೊನ್ನೆ ಸುರಿದ ಮಳೆಯಿಂದ ಚಿಕ್ಕಕೆರೆ ಕೋಡಿ ಬಿದ್ದಂತಹ ಸಂದರ್ಭದಲ್ಲಿ ನೀರಿನ ರಭಸಕ್ಕೆ ರಸ್ತೆ ಕಿತ್ತು ಹೋಗಿದೆ. ಈ ಸೇತುವೆ ಮೂಲಕ ಮಾಳಪ್ಪನಟ್ಟಿ, ಬೋಸೆದೇವರಹಟ್ಟಿ, ಉಪ್ಪಾರಹಟ್ಟಿ, ನೆಲಗೇತನಹಟ್ಟಿ, ಹಾಯಕಲ್, ಚಿತ್ರದುರ್ಗ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಾಗಿದ್ದರಿಂದ ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ತುಂಬಾ ಅನಾನುಕೂಲವಾಗಿದೆ. ಈ ರಸ್ತೆಯ ಮೂಲಕ ಹೋಗುವಾಗ ಜೀವ ಬಿಗಿಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆ ದುರಸ್ತಿಗೆ ಸಂಬಂಧಿಸಿದಂತೆ ಶಾಸಕರ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ತಿರುಗಿಸ ನೋಡದಿರುವುದು ದುರದೃಷ್ಟಕರ ಸಂಗತಿ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಾರ್ಕಂಡಯ್ಯ, ಗುಂಡಯ್ಯ, ರುದ್ರಮುನಿ, ರಘು, ಗಾದ್ರಪ್ಪ, ಕುಮಾರ್ ಇನ್ನು ಮುಂತಾದವರು ಹಾಜರಿದ್ದರು.





About The Author
Discover more from JANADHWANI NEWS
Subscribe to get the latest posts sent to your email.