ಚಳ್ಳಕೆರೆ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಜಾಮಿಯ ಮಸೀದಿ ಸದಸ್ಯರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಚಿವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.








ಈ ವೇಳೆ ಮಾತನಡಿದ ಜಾಮಿಯಾ ಮಸೀದಿ ಅಧ್ಯಕ್ಷ ಯಾಕೂಬ್ ಅಲಿ ಸಚಿವ ಜಮೀರ್ ಅಹ್ಮದ್ ಖಾನ್ ರವರು ಸರ್ವಧರ್ಮದವರನ್ನು ಸಮಾನವಾಗಿ ಕಾಣುವ ಗುಣವುಳ್ಳವರು ಭಗವಂತ ಅವರಿಗೆ ಇನ್ನು ಹೆಚ್ಚಿನ ಆರೋಗ್ಯ ಆಯಸ್ಸು ಕೊಟ್ಟು ಕರ್ನಾಟಕ ಜನತೆಯ ಸೇವೆ ಮಾಡುವ ಭಾಗ್ಯ ಕಲ್ಪಿಸಲಿ ಎಂದರು.
ಮುಖಂಡ ಫರೀದ್ ಖಾನ್ ಮಾತನಾಡಿ ಜಮೀರ್ ಅಹಮದ್ ಖಾನ್ ರವರು ಸಚಿವರಾಗಿ ಜನಪರ ಸೇವೆಯಿಂದಾಗಿ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ ಈಗಾಗಲೇ ಸಚಿವರು ತಮ್ಮ ಸ್ವಂತ ಹಣದಿಂದ ಬಡಜನರ ಅನುಕೂಲಕ್ಕಾಗಿ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದು ಸದಾ ಬಡವರ ಪರವಾದ ಚಿಂತನೆಯಿಂದ ರಾಜ್ಯದ ಜನರ ಸೇವೆ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಟಿ ಎಂ ಸಿ ಮಾಜಿ ಅಧ್ಯಕ್ಷ ಸಿ ಆರ್ ಅಲ್ಲಭಕಾಷ್ ಮಾಜಿ ಪುರಸಭಾ ಸದಸ್ಯ ಎಸ್ ಮುಜಿಬುಲ್ಲ ಹೆಚ್ಎಸ್ ಸೈಯದ್ ಮಾರ್ಬಲ್ ಸಲೀಂ ಅನ್ವರ್ ಮಾಸ್ಟರ್ ಜಾಫರ್ ಮಸೀದಿಯ ಮುತುವಲ್ಲಿ ರಫಿ ಆರೋಗ್ಯ ರಕ್ಷ ಸಮಿತಿಯ ಮಾಜಿ ಸದಸ್ಯ ಇಸ್ಮಾಯಿಲ್ಮಾ ಖಮ್ರೂಜ್ ಜಮಾನ್ ಸೇರಿದಂತೆ ಜಾಮಿಯಾ ಮಸೀದಿಯ ಸದಸ್ಯರು ಹಾಗೂ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.