July 10, 2025
1751379296331.jpg


ಹಿರಿಯೂರು:
ನಗರಕ್ಕೆ ಹೊಂದಿಕೊಂಡಂತಿರುವ ಲಕ್ಕವ್ವನಹಳ್ಳಿಡ್ಯಾಂ ಪಕ್ಕದಲ್ಲಿ ಸಾರ್ವಜನಿಕರು ವಿಹರಿಸಲು ,ವಾಕ್ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಒಂದು ಸುಂದರ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಸ್ಥಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಸುಧಾಕರ್ ರವರು ಮಾತನಾಡಿ ಬಹಳ ದಿನಗಳಿಂದ ಪಾರ್ಕ್ ಮಾಡುವ ಉದ್ದೇಶವನ್ನು ನಾನು ಹೊಂದಿದ್ದು, ಆ ಕಾಲ ಈಗ ಕೂಡಿ ಬಂದಿದೆ.ಎಂದರಲ್ಲದೆ, ನಗರಸಭಾ ಪೌರಾಯುಕ್ತರು ಹಾಗೂ ಅಧಿಕಾರಿ ವರ್ಗದವರಿಗೆ ಪಾರ್ಕ್ ನಿರ್ಮಾಣ ಮಾಡಲು ಸರ್ಕಾರಿ ಜಾಗವನ್ನು ಮಾರ್ಕ್ ಮಾಡುವಂತೆ ಸಚಿವರು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.
ನಗರಕ್ಕೆ ನೀರು ಸರಬರಾಜು ಮಾಡಲು ವೇದಾವತಿ ನದಿಗೆ ಈ ಲಕ್ಕವಳ್ಳಿಡ್ಯಾಂನ್ನು ನಿರ್ಮಾಣ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಸಚಿವರು ಸುಂದರವಾದ ಹಾಗೂ ಉತ್ತಮವಾದ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿರುವುದು ಒಳ್ಳೆಯ ಉದ್ದೇಶವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಮತಾ, ನಗರಸಭೆ ಸದಸ್ಯರುಗಳಾದ ಈರಲಿಂಗೇಗೌಡ, ಈ.ಮಂಜುನಾಥ್, ಬಿ.ಎನ್.ಪ್ರಕಾಶ್, ಗುಂಡೇಶ್ ಕುಮಾರ್, ವಿ.ಶಿವಕುಮಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಖಾದಿರಮೇಶ್, ಯುವ ಮುಖಂಡರಾದ ಜ್ಞಾನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading