
ಪಾವಗಡ.ಜನ ಧ್ವನಿ ನ್ಯೂಸ್ ಜ 1
ವರದಿ ಮದ್ಲೇಟಪ್ಪ ದವಡ ಬೆಟ್ಟ ಪಾವಗಡ:
ರಾಜ್ಯ ಸರ್ಕಾರದ ಆದೇಶವಾಗಿದ್ದು ನಮ್ಮ ಕಂಪನಿಯಿಂದ ಸಪ್ತಾಹದ ಪಾವಗಡ ಉಪ ವಿಭಾಗದಿಂದ ಆಚರಿಸುತ್ತಿದ್ದೇವೆ , ಸಪ್ತಾಹದ ಮುಖ್ಯ ಉದ್ದೇಶ ಏನಂದರೆ ವಿದ್ಯುತ್ ಅಪಘಾತದಿಂದ ಸಂಭವಿಸುವುದನ್ನು ಅದನ್ನು ತಡೆಗಟ್ಟಲು ನಾವು ಹೇಳುವುದೇನೆಂದರೆ ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳಿಗೆ ತಂತಿಯನ್ನು ಕಟ್ಟಿ ಬಟ್ಟೆ ಒಣಗಿಸುವುದು ಮತ್ತು ಜಾನುವಾರುಗಳನ್ನು ಕಟ್ಟುವುದು ಇದರಿಂದಾಗಿ ಹೆಚ್ಚಿನ ವೋಲ್ಟೇಜ್ ಬರುವುದು ಅಪಘಾತಗಳ ಆಗುವುದು ಸಾರ್ವಜನಿಕವಾಗಿ ನಾವು ಕೇಳುವುದೇನೆಂದರೆ ಇಂತಹ ತಪ್ಪುಗಳನ್ನು ಮಾಡಬಾರದೆಂದು ವಿದ್ಯುತ್ತು ಕಂಬಗಳಿಗಾಗಲಿ ಅಥವಾ ಟ್ರಾನ್ಸ್ಪಾರಂ (ಸೆಂಟರ್) ಜಾನುವಾರುಗಳನ್ನು ಕಟ್ಟುವುದಾಗಲಿ ಬಟ್ಟೆಗಳನ್ನು ಒಣಗಿಸುವುದಾಗಲಿ ಈ ತರಹ ಕೆಲಸಗಳನ್ನು ಮಾಡಬೇಡಿ.
ಮಳೆಗಾಲದಲ್ಲಿ ಗಾಳಿ ಮಳೆಗೆ ಕೆಳಗೆ ಬಿದ್ದ ವಿದ್ಯುತ್ ಕಂಬ ತುಂಡರಿಸಿ ಬಿದ್ದ ಎಲೆಕ್ಟ್ರಿಕ್ ವಯರ್ ಮುಟ್ಟುವುದು ಅಂತಹ ಸ್ಥಳಗಳಿಗೆ ತೆರಳಿ ಅಪಾಯ ತಂದುಕೊಳ್ಳುವ ಸಾಧ್ಯತೆ ಇರುತ್ತದೆ.ಅಲ್ಲದೆ ಹಸಿ ಕೈ (ಒದ್ದೆ ಕೈ) ಮೂಲಕ ಕರೆಂಟ್ ಸ್ವಿಚ್ ಬೋರ್ಡ್ ಮುಟ್ಟುವುದು ಆನ್ ಅಂಡ್ ಆಫ್ ಮಾಡುವುದು ಹೀಗೆ ಅನೇಕ ವಿಧದಲ್ಲಿ ವಿದ್ಯುತ್ ನಿಂದ ನಮಗೆ ಅಪಾಯ ಇರುತ್ತದೆ ಇಂತಹ ಸಮಯದಲ್ಲಿ ಅದರಲ್ಲಿಯೂ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಮತ್ತು ಏನು ಮಾಡಬಾರದು.

- ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟಬೇಡಿ.
- ಬಟ್ಟೆಗಳನ್ನ ಒಣಗಿಸುವ ತಂತಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಬೇಡಿ.
- ವಿದ್ಯುತ್ ಸ್ವಿಚ್ಚುಗಳು ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬೇಡಿ.
- ವಿದ್ಯುತ್ ತಂತಿಗಳ ಹತ್ತಿರವಿರುವ ರೆಂಬೆ ಕೊಂಬೆಗಳನ್ನು ಕಡಿಯಬೇಡಿ.
- ವಿದ್ಯುತ್ ಕಂಬಗಳನ್ನು ಹತ್ತಬೇಡಿ.
- ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬೇಡಿ.
- ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನ ಮುಟ್ಟಬೇಡಿ ಟ್ರಾನ್ಸ್ಪಾರಂ ಬೇಲಿಯನ್ನು ಮುಟ್ಟಬೇಡಿ.
- ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬೇಡಿ.
- ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರಗಳನ್ನು ರೆಂಬೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ ಎಂದು ವಿವರವಾಗಿ ರಾಜಶೇಖರ್ ಎಸ್.ರವರು ತಿಳಿಸಿದರು.
- ವಿದ್ಯುತ್ ಉಪಕರಣಗಳನ್ನು ಲೈಸೆನ್ಸ್ ಹೊಂದಿರುವ ಎಲೆಕ್ಟ್ರಿಷಿಯನ್ ರವರಿಂದ ಮಾತ್ರ ದುರಸ್ತಿ ಮಾಡಿಸಿ. ವಿದ್ಯುತ್ ಉಪಕರಣಗಳನ್ನು ಸುರಕ್ಷತೆಗಾಗಿ ನಿಯಮ ನಿಯತಕಾಲಿಕವಾಗಿ ಪರೀಕ್ಷಿಸಿಕೊಳ್ಳಿ.
- ನಿಮ್ಮ ವಿದ್ಯುತ್ ಸಂಪರ್ಕಕ್ಕೆ ಸೂಕ್ತ ಗ್ರೌಂಡಿಂಗ್ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
- ವೈರಿಂಗ್ ಕೆಲಸವನ್ನು ಸರ್ಕಾರಿ ಲೈಸೆನ್ಸ್ ಹೊಂದಿದ ವಿದ್ಯುತ್ ಗುತ್ತಿಗೆದಾರರಿಂದ ಮಾತ್ರ ಮಾಡಿಸಿಕೊಳ್ಳಿ.
- ಪ್ಲಗ್ ಪಾಯಿಂಟುಗಳು ಮಕ್ಕಳ ಕೈಗೆ ಎಟುಗದಂತಿರಲಿ.
- ಯಾವಾಗಲೂ ಮೂರು ಪಿನ್ನುಗಳ ಪ್ಲೇಗ್/ ಸಾಕೆಟ್ಗಳನ್ನು ಬಳಸಿ ಹಾಗೂ ಮೂರನೇ ಪಿನ್ ಅರ್ಥಿಂಗ್ ಮಾಡಿಸಿ. ಕೆಲವರು ತೊಟ್ಟಿಗಳಿಗೆ ಮೋಟರ್ ಅಳವಡಿಸಿಕೊಂಡು ಮೈನ್ ಸ್ವಿಚ್ ಆಫ್ ಮಾಡದೆ ಪ್ಲಗ್ ತೆಗಿಯಲು ಹೋದಾಗ ಆಕ್ಸಿಡೆಂಟ್ ಗಳು ಹಾಗುತ್ತವೆ ಹೊಲಗಳಲ್ಲಿ ಊರುಗಳಲ್ಲಿ ತಂತಿ ಬಿದ್ದಾಗ ಮುಟ್ಟಬಾರದು ತುಳಿಯದೆ ನಮ್ಮ ಸಹಕಾರ ಸಹಾಯವಾಣಿ 1912 ಗೆ ಕರೆ ಮಾಡಿ ಲೈನ್ ಮೆನ್ ಗಳಿಗಾಗಿ JE ಗಳಿಗಾಗಲಿ AEE ಗಳಿಗಾಗಲಿ ಅಪಘಾತ ಆಗದೆ ತಪ್ಪಿಸುವುದನ್ನು ನಮ್ಮ ಬೆ. ವಿ. ಕಂ. ಗೆ ಪಾವಗಡ ಉಪ ವಿಭಾಗದಲ್ಲಿ ಯಾವುದೇ ಅಪಘಾತವಾಗದಂತೆ ಸಹಕರಿಸಬೇಕೆಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನಮ್ಮ ಇಲಾಖೆ ಲಾಸ್ ಆಗುತ್ತಿದೆ ಎಲ್ಲರೂ ಮೀಟರ್ ಅಳವಡಿಸಿಕೊಳ್ಳಬೇಕಾಗಿ ವಿನಂತಿ.
ಸಪ್ತಾಹ ಜಾಗೃತಿ ಜಾತದಲ್ಲಿ ಬೆಸ್ಕಾಂ ಅಧೀಕ್ಷಕರು ಅಭಿಯಂತರಾದ BG ಕೃಷ್ಣಮೂರ್ತಿ . ಸಹಾಯಕ ಇಂಜಿನಿಯರ್ ಆಂಜನೇಯ ಬಾಬು. ಕಿರಿಯ ಇಂಜಿನಿಯರ್ಗಳಾದ ರಾಜಶೇಖರ್ ಎಸ್. ಸಂಜೀವ ರಾಯಪ್ಪ. ರಮೇಶ್ ಬಾಬು. ವಂಶಿ ಕೃಷ್ಣಾರೆಡ್ಡಿ. ಇನ್ನೂ ಹಲವಾರು ಅಧಿಕಾರಿಗಳು ಮತ್ತು ನೌಕರರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.