
ಶೋಷಿತರು ಬೇಡುವ ಕೈಗಳಿಗಿಂತ ನೀಡುವ ಕೈಗಳನ್ನು ಹೊಂದಬೇಕೆಂಬ ಕನಸನ್ನು ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಹೊಂದಿದ್ದರೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು




ಅವರು ನಾಯಕನಹಟ್ಟಿ ಹೋಬಳಿಯ ಎನ್ ಉಪ್ಪಾರಟ್ಟಿ ಗ್ರಾಮದಲ್ಲಿ ಜೈ ಭೀಮ್ ಯುವಕ ಸಂಘದಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದಲ್ಲಿ ಶೋಷಿತರುಪ್ರತಿಷ್ಠಿತ ಹುದ್ದೆಗಳನ್ನು ಮತ್ತು ಸ್ಥಾನವನ್ನು ಅಲಂಕರಿಸಬೇಕೆಂಬ ಆಶಯವನ್ನು ಹೊಂದಿದ್ದರು ಇದರ ಮುಖಾಂತರ ಸಂಕಷ್ಟದಲ್ಲಿರುವ ಮತ್ತು ತೊಂದರೆಯಲ್ಲಿರುವ ಸಮಾಜದ ಜನರ ನೋವನ್ನು ನಿವಾರಿಸಿ ಈ ಸಮುದಾಯಗಳ ಬೆನ್ನೆಲುಬಾಗಿ ಈ ಹುದ್ದೆಯಲ್ಲಿರುವವರು ನಿಲ್ಲಬೇಕೆಂಬ ಕನಸನ್ನು ಹೊಂದಿದ್ದರು ಇಡೀ ತಮ್ಮ ಜೀವನವನ್ನು ಶೋಷಿತರಿಗೆ ಮುಡುಪಾಗಿಟ್ಟಿದ್ದರು ಈ ಸಮುದಾಯ ಅವರ ಕನಸುಗಳನ್ನು ನನಸು ಮಾಡಿದಾಗ ಮಾತ್ರ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದಂತಾಗುತ್ತದೆ ಪ್ರತಿಯೊಂದು ಕುಟುಂಬದಲ್ಲೂ ಕೂಡ ಸಂಸ್ಕಾರ ಹಿತ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವುದರ ಜೊತೆ ಸಮಾಜದ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಈ ಸಮುದಾಯದ ಎಲ್ಲರೂ ಮುನ್ನುಡಿ ಬರೆಯಬೇಕೆಂದು ಮನವಿ ಮಾಡಿದರು
ಪಟೇಲ್ ಜಿ ತಿಪ್ಪೇಸ್ವಾಮಿ ಯತ್ನಟ್ಟಿ ಗೌಡ್ರು ಮಾತನಾಡಿ ಈ ಭಾಗದ ಈ ಸಮುದಾಯದ ಜನ ಸನ್ನಡತೆ ಉಳ್ಳವರು ಅಷ್ಟೇ ಸ್ವಾಭಿಮಾನಿಗಳು ಇನ್ನು ಸ್ವಾವಲಂಬನೆಯ ಬದುಕು ಕಂಡುಕೊಳ್ಳಲು ಸಾಧ್ಯವಾಗಿಲ್ಲ ಇದಕ್ಕೆಲ್ಲ ಶಿಕ್ಷಣ ಮೂಲ ಮಂತ್ರ ಅಂಬೇಡ್ಕರ್ ಆಶಯದಂತೆ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮನೋಭಾವವನ್ನು ಸಮುದಾಯದ ಯುವಕರು ರೂಡಿಸಿಕೊಳ್ಳಬೇಕು ಗ್ರಾಮದಲ್ಲಿ ಶಾಂತಿ ಮತ್ತು ಸಮ್ಯಮ್ಮಕ್ಕೆ ಒತ್ತು ನೀಡಬೇಕೆಂದು ಹೇಳಿದರು
ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಎಂ ಓ ಟಿ ಸ್ವಾಮಿ ಮಾತನಾಡಿ ಅಂಬೇಡ್ಕರ್ ರವರಿಗೆ ವಿದೇಶದಲ್ಲೆ ನೆಲಸಿ ಶ್ರೀಮಂತಿಕೆಯ ಜೀವನ ಅನುಭವಿಸಲು ಸಾಕಷ್ಟು ಅವಕಾಶವಿದ್ದಾಗ್ಯೂ ಕೂಡ ಭಾರತದಲ್ಲಿರುವಂತಹ ಶೋಷಿತರ ದುಸ್ಥಿತಿಯನ್ನು ಕಂಡು ಸಾಮಾಜಿಕವಾಗಿ ಇವರನ್ನು ಬದಲಾವಣೆ ಮಾಡಬೇಕೆಂಬ ಆ ಹಂಬಲದಿಂದ ಭಾರತಕ್ಕೆ ಬಂದು ಶೋಷಣೆ ಮತ್ತು ಅವಮಾನಗಳನ್ನು ಮೀರಿ ದೇಶಕ್ಕೆ ಮಾದರಿಯದ ಸಂವಿಧಾನದ ಮುಖಾಂತರ ಈ ವರ್ಗಕ್ಕೆ ಸಮಾನತೆಯ ನ್ಯಾಯ ಕೊಡಿಸುವ ಕೆಲಸ ಮಾಡಿದರು ಎಂದು ಹೇಳಿದರು
ಗ್ರಾಮ ಪಂಚಾಯತಿ ಸದಸ್ಯ ಮಲ್ಲಿ ಜೈ ಭೀಮ್ ಯುವಕ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.