ಹೊಸದುರ್ಗ:ದೇಸಿಯ ಸಂಸ್ಕೃತಿಯನ್ನು ಬಿಂಬಿಸಿ, ದೇಸಿ ನೆಲೆಗಳನ್ನು ಗುರುತಿಸುವ ಮೂಲತನವನ್ನು ಉಳಿಸಿ, ಬೆಳೆಸುವ ಸಲುವಾಗಿ, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏ.೩ ರಂದು ಗುರುವಾರ ಬೆಳಿಗ್ಗೆ ೧೦.೩೦ ಕ್ಕೆ ಕಾಲೇಜಿನ ಆವರಣದಲ್ಲಿ ಜಾನಪದ ಉತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಸಮಾರಂಭಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ನೆಡೆಯುತ್ತಿದೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಅಶ್ವಥ್ ಯಾದವ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಜಾನಪದ ನೃತ್ಯ, ಜಾನಪದ ವೇಷ ಭೂಷಣಗಳು, ಗ್ರಾಮೀಣ ಸೊಗಡಿನ ಪರಿಕರಗಳ ಪ್ರದರ್ಶನ, ಕೃಷಿ ಪರಿಕರಗಳ ಪ್ರದರ್ಶನ, ಗ್ರಾಮೀಣ ದೈವರಾಧನೆ, ಜಾನಪದ ಶೈಲಿಯ ಅಲಂಕಾರ, ಗ್ರಾಮೀಣ ಜಾನಪದ ಕ್ರೀಡೆಗಳು, ಹಳ್ಳಿಯ ಶೈಲಿಯ ಊಟ/ ಖಾದ್ಯಗಳ ಪ್ರದರ್ಶನ ಮತ್ತು ಎತ್ತಿನಗಾಡಿ ಪ್ರದರ್ಶನ ಇರುತ್ತದೆ ಎಂದು ತಿಳಿಸಿರುವ ಅವರು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಲಿದ್ದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು. ಸ್ಥಳೀಯ ಮುಖಂಡರು, ಹಳೆಯ ವಿದ್ಯಾರ್ಥಿಗಳು, ಕಾಲೇಜು ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.