ನಾಗತಿಹಳ್ಳಿಮಂಜುನಾಥ್
ಹೊಸದುರ್ಗ:ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದಂತಹ ಅಮೃತ್‌ಮಿತ್ರ ಯೋಜನೆಯಡಿಯಲ್ಲಿ ಮಹಿಳಾ ಸಬಲೀಕರಣ ದೃಷ್ಟಿಯ ಹಿನ್ನೆಲೆಯಲ್ಲಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಂದ ಅಮೃತ್ ಮಿತ್ರ 2.0 ಕಾಮಗಾರಿಯಡಿ ಉದ್ಯಾನ ವನಗಳ ನಿರ್ವಹಣೆಯನ್ನು ಪಟ್ಟಣದ ಸ್ವ ಸಹಾಯ ಗುಂಪುಗಳಿಗೆ ವಹಿಸಿದ್ದು ಅದರಂತೆ ಪಟ್ಟಣದ ಉದ್ಯಾನವನಗಳನ್ನ ಸಂಪೂರ್ಣವಾಗಿ ಸ್ವಚ್ಚಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂಧರ್ಬದಲ್ಲಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ವ ಸಹಾಯ ಸಂಘಗಳ ಸದಸ್ಯರುಗಳನ್ನ ಕರೆದು ಸಭೆ ಕೈಗೊಂಡು ಅವರಿಂದ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು, ಯಾವ ಮಹಿಳಾ ಸಂಘದವರು ಉತ್ತಮವಾಗಿ ಉದ್ಯಾನವನಗಳನ್ನು ನಿರ್ವಹಣೆ ಮಾಡುತ್ತಾರೋ ಅಂತವರಿಗೆ ಅವಕಾಶ ನೀಡುವ ಉದ್ದೇಶವನ್ನ ಹೊಂದಿದ್ದು ಅದರಂತೆ ಪಂಪ್ ಹೌಸ್ ಬಳಿ ಇರುವ ಉದ್ಯಾನವನ್ನ ನಿರ್ವಹಣೆ ಮಾಡಲು ಕೊಲ್ಲಾಪುರದಂಮ್ಮ ಸ್ವ ಸಹಾಯ ಸಂಘ ಮತ್ತು ಪುರಸಭೆಯ ಸಹಯೋಗದೊಂದಿಗೆ ಸಂಪೂರ್ಣ ಸ್ವಚ್ಚ ಮಾಡುವ ಮೂಲಕ ಕಾರ್ಯಕ್ರಮವನ್ನ ಅನುಷ್ಠಾನ ಮಾಡಲಾಯಿತು.
ಮಹಿಳಾ ಸಬಲೀಕರಣ ದೃಷ್ಟಿಯಿಂದ ತೆರಿಗೆ ಸಂಗಹ್ರದಲ್ಲೂ ಕೂಡ ಮಹಿಳೆಯರನ್ನ ತೋಡಗಿಸಿಕೊಂಡು ಶೇ. 5 ರಷ್ಟು ವಿನಾಯಿತಿ ನೀಡುವ ಮೂಲಕ ಮಹಿಳೆಯರು ತಮ್ಮ ತಮ್ಮ ವಾರ್ಡುಗಳಲ್ಲಿ ಎಸ್.ಎಸ್, ಕರ ವನ್ನು ಮತ್ತು ನೀರಿನ ತೆರಿಗೆ, ಆಸ್ತಿ ತೆರಿಗೆಯನ್ನು ಸಂಗ್ರಯಸುವ ಮೂಲಕ ಮಹಿಳೆಯರಿಗೆ ಆಧ್ಯತೆ ನೀಡಲಾಗಿದೆ,
ಪಟ್ಟಣದ ವ್ಯಾಪ್ತಿಯಲ್ಲಿ ಸರಬರಾಜು ಆಗುವಂತಹ ಕುಡಿಯುವ ನೀರನ್ನು ಪರೀಕ್ಷಿಸಿ ಕುಡಿಯಲು ಯೋಗ್ಯವಾಗಿರುವ ಬಗ್ಗೆ ಗುಣ ಮಟ್ಟವನ್ನು ಖಾತ್ರಿ ಪಡಿಸಿಕೊಳ್ಳಲು ಮಹಿಳಾ ಸಂಘವಾದ ಶ್ರೀ ಬನಶಂಕರಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ನಿಯೋಜನೆ ಮಾಡಲಾಗಿದೆ.ವೈಭ,ವ ಲಕ್ಷಿö್ಮ ಸ್ವ-ಸಹಾಯ ಮಹಿಳಾ ಸಂಘವನ್ನು ಸಹಾ ಕುಡಿಯುವ ನೀರನ್ನು ಪರೀಕ್ಷಿಸಲು ನಿಯೋಜನೆ ಮಾಡಲಾಗಿದೆ ಎಂದರು.
ಪುರಸಭೆಯಿಂದ ಈಗಾಗಲೆ ರೂ.2.6 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಮೂರು ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡುವ ದೃಷ್ಟಿಯಿಂದ ಅವರಿಗೆ ಸಲಕರಣೆಗಳನ್ನು ಮತ್ತು ಅಗತ್ಯವಿರುವ ಟೆಸ್ಟ್ ಕಿಟ್‌ಗಳನ್ನು ಖರೀದಿಸಿ ಮಹಿಳಾ ಸಂಘಗಳ ಮೂಲಕ ಕೆಲಸ ನಿರ್ವಹಿಸಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂಧರ್ಬದಲ್ಲಿ ಕಂದಾಯ ಅಧಿಕಾರಿ ಯೋಗೇಶ್, ಕರ ವಸೂಲಿಗಾರ ವಿನಯ್,ಕಛೇರಿ ವ್ಯವಸ್ಧಾಪಕಿ ಸಾವಿತ್ರಮ್ಮ, ಆರೋಗ್ಯ ನಿರೀಕ್ಷಕರುಗಳಾದ ಬಸವರಾಜ್,ಕಲ್ಪನ, ಪುರಸಭಾ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಗೀತಾ ಸೇರಿದಂತೆ ಮಹಿಳಾ ಸಂಘಗಳ ಒಕ್ಕೂಟದ ಸದಸ್ಯರುಗಳು ಉಪಸ್ಧಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.