March 1, 2026
IMG-20260301-WA0142.jpg

ಮಕ್ಕಳ ಕಲಿಕೆ ಉತ್ತಮಪಡಿಸಿದರೆ ಅವರ ಉನ್ನತ ಶಿಕ್ಷಣ ಉಜ್ವಲವಾಗುತ್ತದೆ ಕೆ.ಆರ್. ತಿಪ್ಪೇಸ್ವಾಮಿ ಸಲಹೆ.

ಜಗಳೂರು-: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಸಹಕರಿಸಿ ಎಂದು ಎಸ್ ಕೆ.ಒ.ಎಸ್‌.ಟಿ. ಮೆಮೋರಿಯಲ್ ಸ್ಕೂಲ್ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ತಿಳಿಸಿದರು.

ಶನಿವಾರ ಜಗಳೂರು- ತಾಲೂಕಿನ ಹಿರೇಮಲ್ಲನ ಹೊಳೆ ಗ್ರಾಮದ ಎಸ್ ಕೆ ಓ ಎಸ್ ಟಿ ಮೆಮೋರಿಯಲ್ ಸ್ಕೂಲ್ ಆವರಣದಲ್ಲಿ ಶ್ರೀ ರಾಜಲಿಂಗ ಸ್ವಾಮಿ ಎಸ್‌ಸಿ/ ಎಸ್ ಟಿ ವಿದ್ಯಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಜಗಳೂರು ಸಂಯಕ್ತಾಶ್ರಯದಲ್ಲಿ ಎಸ್ ಕೆ.ಒ.ಎಸ್‌.ಟಿ. ಮೆಮೊರಿಯಲ್ ಸ್ಕೂಲ್ ಹಿರೇಮಲ್ಲನಹೊಳೆ ವತಿಯಿಂದ 15ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಲಾ ಹಂತದ ಮಕ್ಕಳಿಗೆ ಪಠ್ಯ – ಸಹಪಠ್ಯ ಚಟುವಟಿಕೆಗಳನ್ನು ಶಿಕ್ಷಕರು ನಿಯಮಿತವಾಗಿ ಕೈಗೊಂಡು ಸರ್ವತೋಮುಖ ಬೆಳವಣಿಗೆಗೆ ಮತ್ತು ವಿಕಾಸಕ್ಕೆ ಅನುವು ಮಾಡಿಕೊಡಬೇಕು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಅವರ ಭವಿಷ್ಯ ಉಜ್ವಲವಾಗಿ ಇರಲು ಸಾಧ್ಯ ಎಂದರು .

ಕ್ರೀಡಾಪಟು ಹಾಲೇಶ್ ಮಾತನಾಡಿದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಇಂತಹ ಸಂಸ್ಥೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಇಂತಹ ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ಸರ್ಕಾರ ಕೈಜೋಡಿಸಬೇಕು ಎಂದರು.

ಇನ್ನೂ ಈ ವೇಳೆ ಈ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ವ್ಯಾಸಂಗ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಾದ ಈ. ಮಾನಸ ,ಎನ್ ಡಿ.ಭೂಮಿಕಾ, ಟಿ. ಚಿನ್ಮಯಿ, ಆರ್ ಸಹನ, ಎಚ್ ಎನ್ ಕವನ, ಸುಪ್ರಿಯಾ ,ಸೃಜನ್, ಎಲ್ ತರುಣ್, ಎನ್ ಎಂ. ತಿಪ್ಪೇಸ್ವಾಮಿ ರವರಿಗೆ ಸನ್ಮಾನಿಸಲಾಯಿತು

ಶಿಕ್ಷಕಿ ಸೌಭಾಗ್ಯ ಜಗಳೂರು, ಗ್ರಾಮ ಪಂಚಾಯತಿ ಸದಸ್ಯ ಈರಮ್ಮ ಶಿವಣ್ಣ, ಶಿವಮೂರ್ತಿ, ಅನ್ನಪೂರ್ಣಮ್ಮ, ಶಾಲೆಯ ಬೂದಾನಿಗಳು ಶಿವಣ್ಣ, ಸೊಕ್ಕೆ ಎಸ್.ಕೆ.ಒ ಎಸ್ ಟಿ ಮೆಮೊರಿಯಲ್ ಶಾಲೆಯ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಹಿರೇಮಲ್ಲನಹೊಳೆ ಮುಖ್ಯ ಶಿಕ್ಷಕಿ ರೇಖಾ, ಸೇರಿದಂತೆ ಶ್ರೀ ರಾಜ ಲಿಂಗ ಸ್ವಾಮಿ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಪೋಷಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading