
ಚಳ್ಳಕೆರೆ ಮಾ.1
ಹಿರಿಯ ನಾಗರಿಕರಿಗೆ ಉಚಿತ ಕಾನೂನು
ಸಲಹೆ ಹಾಗೂ ತುರ್ತು ಸಮಸ್ಯೆಗಳ ಸ್ಪಂದನೆಗೆ ದಿನದ 24ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ
ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸಂಪತ್ ಕುಮಾರ್ ಹೇಳಿದರು.
ನಗರದ ಸರಕಾರಿ ನೌಕರರ ಸಮುಧಾಯ ಭವನ ಸಭಾಂಗಣದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.ಜಿಪಂ.ತಾಪಂ ಸಹಯೋಗದಲ್ಲಿ
ಶನಿವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಉಚಿತ ತಪಾಸಣೆ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮನುಷ್ಯನಿಗೆ ಕಣ್ಣು ಬಹಳ ಮುಖ್ಯ
60 ವರ್ಷ ಮೇಲ್ಪಟ್ಟವರಿಗೆ ಆರ್ಥಿಕ ಭದ್ರತೆ, ಆರೋಗ್ಯ ಪಾಲನೆ, ಆಶ್ರಯ ಮತ್ತು ಅವರ ಕಲ್ಯಾಣಕ್ಕಾಗಿ ಕೇಂದ್ರ
ಹಾಗೂ ರಾಜ್ಯ ಸರ್ಕಾರಗಳು ವೃದ್ಧಾಶ್ರಮ, ಊಟ, ವಸತಿ ಸೇರಿ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಿವೆ. ಅವುಗಳ
ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನೇತ್ರತಜ್ಞೆ ಡಾ.ಶಿಲ್ಪ ಮಾತನಾಡಿ ಕೆಲದ ಒತ್ತಡ. ಆರ್ಥಿಕ ಸಮಸ್ಯೆ ಬಡತನದಿಂದಾಗಿ ಕಣ್ಣಿನ ಆರೋಗ್ಯ ಸಮಸ್ಯೆ ಕಾಡುತ್ತಿದ್ದರು ಚಿಕಿತ್ಸೆ ಪಡೆಯದೆ ಶಾಸ್ವತ ಕುರುಡುನಕ್ಕೆ ಸಿಲುಕುವ ನಿದರ್ಶನಗಳಿದ್ದು ಬಡಕುಟುಂದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಉಚಿತ ಕಣ್ಣಿನ ಹಾಗೂ ಆರೋಗ್ಯದ ತಪಾಸಣೆ ಅಗತ್ಯ ಇರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಇಂತಹ ಉಚಿತ ಆರೋಗ್ಯ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಣ್ಣಿನ ದೃಷ್ಠಿಕಾಪಾಡಿಕೊಳ್ಳುವಂತೆ ತಿಳಿದಿದರು.
ಶಿಬಿರದಲ್ಲಿ ಕಣ್ಣು ಪರೀಕ್ಷಕರಾದ ಪಂಚಜನ್ಯ. ನವೀನ್.ನರಸಿಂಹಮೂರ್ತಿ ಇತರರಿದ್ದರು.











About The Author
Discover more from JANADHWANI NEWS
Subscribe to get the latest posts sent to your email.