September 15, 2025
IMG-20250301-WA0413.jpg

.

ನಾಯಕನಹಟ್ಟಿ: ಪ್ರತಿಯೊಬ್ಬ ವಿದ್ಯಾರ್ಥಿಯು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರೇರಣೆಯಾಗಬೇಕು ಎಂದು ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.

ಶನಿವಾರ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿ ಶ್ರೀ ರಾಜಲಿಂಗೇಶ್ವರ ಎಸ್ ಟಿ ವಿದ್ಯಾ ಸಂಸ್ಥೆ ಜಗಳೂರು ವತಿಯಿಂದ ಶ್ರೀ ಮೂಗ ಬಸವೇಶ್ವರ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ವಿಜ್ಞಾನ ಬೆಳೆದಂತೆ ತಂತ್ರಜ್ಞಾನ ವೃದ್ಧಿಯಾಗಿ ಸಮಾಜಕ್ಕೆ ಸಹಕಾರಿಯಾಗಿದೆ. ನಾವುಗಳು ಬಳಸುವ ಪ್ರತಿಯೊಂದರಲ್ಲೂ ವಿಜ್ಞಾನವಿದೆ. ವಿಜ್ಞಾನ ವಿಲ್ಲದಿದ್ದರೆ ನಾವುಗಳು ಈ ಮಟ್ಟದಲ್ಲಿ ಇರಲು ಸಾಧ್ಯವಿಲ್ಲ ವಿಜ್ಞಾನ ತುಂಬಾ ವೇಗವಾಗಿ ಬೆಳೆಯುತ್ತದೆ ಎಂದು ಹೇಳಿದರು.

ಪ್ರಾಸ್ತವಿಕವಾಗಿ ಶ್ರೀ ಮೂಗಬಸವೇಶ್ವರ ಶಾಲೆಯ ಮುಖ್ಯ ಶಿಕ್ಷಕಿ ಎಂ.ಟಿ ಸುನಿತಾ ಮಾತನಾಡಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಪ್ರತಿವರ್ಷ ಫೆಬ್ರವರಿ 28ರಂದು ಆಚರಣೆ ಮಾಡುತ್ತೇವೆ ವಿಜ್ಞಾನ ಎಂಬುದು ನಮ್ಮಿಂದಲೇ ಶುರುವಾಗುತ್ತದೆ ನಮ್ಮ ದೇಹದಲ್ಲಿ ವಿಜ್ಞಾನ ಎಂಬುದು ತುಂಬಿದೆ ಪ್ರತಿಯೊಬ್ಬರಿಗೂ ವಿಜ್ಞಾನ ಅವಶ್ಯಕತೆ ಬಹಳ ಇದೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಯನ್ನು ಕೆಲವೇ ಸೆಕೆಂಡುಗಳಲ್ಲಿ ಸಂಪರ್ಕಿಸುವಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಅಷ್ಟೊಂದು ಮುಂದುವರೆದಿದೆ ವಿಜ್ಞಾನಿಗಳ ಫಲ ಪರಿಶ್ರಮ ಬಹಳ ಇದ್ದು ಪ್ರತಿಯೊಬ್ಬರು ವಿಜ್ಞಾನವನ್ನ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು ಎಂದರು.

ಇನ್ನೂ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕ ಕೆ.ಟಿ. ನಾಗಭೂಷಣ್ ಮಾತನಾಡಿ ಈ ದಿನ ಸಿ ವಿ ರಾಮನ್ ರವರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ವಿಜ್ಞಾನ ಎಂದರೆ ಭೂಮಿ, ಗಾಳಿ, ನೀರು ಎಲ್ಲದರಲ್ಲೂ ವಿಜ್ಞಾನ ಸೇರಿಕೊಂಡಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ, ಸಮಾಜದಲ್ಲಿ, ರಾಜ್ಯ ಹಾಗೂ ಜಿಲ್ಲೆಗಳಲ್ಲಿ, ದೇಶ ಮತ್ತು ರಾಷ್ಟ್ರಗಳಲ್ಲಿ ಕೂಡ ಪ್ರತಿದಿನ ವಿಜ್ಞಾನ ದಿನಾಚರಣೆಯನ್ನು ಆಚರಣೆ ಮಾಡುತ್ತೇವೆ. ನಾವು ನೀವು ವಿಜ್ಞಾನಿಗಳನ್ನು ಫೋಟೋದಲ್ಲಿ ನೋಡಿರುತ್ತೇವೆ. ತುಂಬಾ ಬಿಡುವಿಲ್ಲದೆ ಗಡ್ಡಗಳನ್ನು ಬಿಟ್ಟಿರುತ್ತಾರೆ, ಒಂದು ಚಿತ್ರಣವಿದೆ. ಸತ್ಯನು ಹೌದು ಈಗಿನ ವಿಜ್ಞಾನಿಗಳು ತುಂಬಾ ಬುದ್ಧಿವಂತರಿದ್ದಾರೆ. ಈಗಿನ ಮಕ್ಕಳು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಒಬ್ಬ ಉತ್ತಮ ವಿಜ್ಞಾನಿಯಾಗಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿರಾದ ಶಿಲ್ಪ, ಜ್ಯೋತಿ, ಪವಿತ್ರ, ಶಿಕ್ಷಕ ಪಾಲಾಕ್ಷ, ಪೋಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading