
ನಾಯಕನಹಟ್ಟಿ : ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಮೊಳಕಾಲ್ಮೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು…




ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಕೀಲರಾದ ಎಸ್. ಪರಮೇಶ್ ಮಾತನಾಡಿದ ಭಾರತೀಯ ಕಾನೂನಿನಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದೆ. ಶಿಕ್ಷಣದಿಂದ ನೈತಿಕ ಮೌಲ್ಯಗಳನ್ನು ಬಿತ್ತುವುದರಿಂದ ಉತ್ತಮ ಸಮಾಜವು ನಿರ್ಮಾಣವಾಗುತ್ತದೆ. ಉತ್ತಮ ಸಮಾಜ ನಿರ್ಮಾಣವಾದರೆ ಉನ್ನತ ದೇಶ ನಿರ್ಮಿತವಾಗುತ್ತದೆ. ಆದ್ದರಿಂದ ಭಾರತೀಯ ಕಾನೂನಿನ ಒಳಗೆ ಶಿಕ್ಷಣವನ್ನು 14 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯವನ್ನಾಗಿ ಮಾಡಲಾಗಿದೆ..
ಶಿಕ್ಷಣ ಒಂದು ದೇಶದ ಅಭಿವೃದ್ಧಿಯ ಬಾಗಿಲನ್ನು ತೆರೆಯುವ ಕೀಲಿ ಕೈಯಿದ್ದಂತೆ. “ಶಿಕ್ಷಣವೇ ಮಾನವನ ವಿಕಾಸದ ಹೆದ್ದಾರಿ “, ಹಾಗಾಗಿ ನಾವೆಲ್ಲರೂ ಶಿಕ್ಷತರಾಗುವುದರ ಮೂಲಕ, ಭಾರತೀಯ ಸಂವಿಧಾನದ ಮತ್ತು ಕಾನೂನಿನ ಘನತೆ ಗೌರವ ಸ್ವಾಭಿಮಾನವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದರು..
ಭಾರತದಂತಹ ದೇಶದ ಒಳಗೆ ಇನ್ನು ಸಾಮಾಜಿಕ ಮೂಲ ಪಿಡುಗುಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ಬಾಲಕಾರ್ಮಿಕ ಪದ್ಧತಿ ಹಾಗೂ ಜೀತ ಪದ್ಧತಿ, ಇನ್ನೂ ಮೊದಲಾದ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಬೇಕಿದೆ..
ಸಮಾನತೆ , ಮಹಿಳಾ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳು, ಮೂಲಭೂತ ಹಕ್ಕುಗಳು,ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಇವುಗಳು ಸಂವಿಧಾನದ ಮತ್ತು ಕಾನೂನಿನ ಆಸ್ತಿಯಾಗಿವೆ. ಆದ್ದರಿಂದ ಇವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಬೇಕಿದೆ.. ಕಾನೂನುಗಳು ನಮ್ಮ ಸಂವಿಧಾನದ ಜೀವಾಳವಾಗಿವೆ ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ..
ಆದ್ದರಿಂದ ಸಂವಿಧಾನ ಮತ್ತು ಭಾರತೀಯ ಕಾನೂನಿನ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಪ್ರಜಾಪ್ರಭುತ್ವ ನಮ್ಮ ಧರ್ಮವಾಗಬೇಕು, ಅದರೊಳಗಿನ ಕಾನೂನುಗಳು, ನಮ್ಮ ಧರ್ಮ ಗ್ರಂಥವಾಗಬೇಕು..
ಸೂರ್ಯನಿಲ್ಲದ ಜಗತ್ತನ್ನು ಹೇಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೋ, ಹಾಗೆಯೇ ಕಾನೂನುಗಳು ಇಲ್ಲದ ದೇಶವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಕಾನೂನುಗಳು ಒಂದು ದೇಶದ ರಕ್ಷಾ ಕವಚ ಇದ್ದಂತೆ, ಕಾನೂನುಗಳಿಂದಾಗಿ ಇಂದು ಭಾರತದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ.. ಕಾನೂನುಗಳು ಇಲ್ಲದೆ ಹೋದರೆ, ಇಡೀ ದೇಶ ಅಶಾಂತಿ, ದೌರ್ಜನ್ಯ,ದಬ್ಬಾಳಿಕೆ, ಮೊದಲಾದವುಗಳು ಉಂಟಾಗಿ ದೇಶ ಅವನತಿಯ ಹಂತಕ್ಕೆ ಸಾಗುತ್ತದೆ.. ಆದ್ದರಿಂದ ಕಾನೂನುಗಳನ್ನು ಗೌರವಿಸಿ ಅವುಗಳನ್ನ, ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಕಾನೂನುಗಳನ್ನು ನಾವೆಲ್ಲರೂ ರಕ್ಷಿಸೋಣ ಎನ್ನುವ ಸಲಹೆ ನೀಡಿದರು..
ಈ ಸಂದರ್ಭದಲ್ಲಿ ಸಮಾಜ ಪರಿವರ್ತನಾ ಸೇವಾ ಸಂಸ್ಥೆಯ ಗೌರವ ಅಧ್ಯಕ್ಷ ಎಂ. ರುದ್ರಯ್ಯ ,ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಜಣ್ಣ,ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಕೆ ನಾಗರಾಜ್, ಗ್ರಾಮದ ಮುಖಂಡರಾದ ಮಂಜುನಾಥ್, ಶಿಕ್ಷಕಿ ಡಾ.ಮಂಜುಳಾ, ಸಹ ಶಿಕ್ಷಕರಾದ ಶಿವಕುಮಾರ್, ದಾದಾಪೀರ್, ಜಾಕಿರ್ ಹುಸೇನ್, ವಿಜಯಕಲಾ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಂಜಣ್ಣ, ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು..
About The Author
Discover more from JANADHWANI NEWS
Subscribe to get the latest posts sent to your email.