September 15, 2025
IMG-20250301-WA0294.jpg

ಚಳ್ಳಕೆರೆ ಮಾ.1

ಗುಡ್ಡಗಾಡು ಪ್ರದೇಶದಿಂದ ಗ್ರಾಮಗಳತ್ತ ಕರಡಿ ಚಿರತೆಗಳು ಬರುತ್ತಿವೆ ಇವುಗಳಿಂದ ಸೂಕ್ತ ರಕ್ಷಣೆ ನೀಡುವಂತೆ ನನ್ನಿವಾಳ ಗ್ರಾಪಂ ಮಾಜಿ‌ಅಧ್ಯಕ್ಷ ಬಸವರಾಜ್ ಅಳಲು ತೋಡಿಕೊಂಡರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನಿಂದ ರಾಂಪುರ ಗ್ರಾಮದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಧ್ಯೆ ನಗರದ ಪ್ರಾವಾಸಿ ಮಂದಿರದಲ್ಲಿ ಕಾರ್ಯಕರ್ತರ ಮುಖಂಡರ ಹಾಗೂ ಅರಣ್ಯಾಧಿಕಾರಿಗಳೊಂದಿ ಮಾತನಾಡುವ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ನನ್ನಿವಾಳ ಗ್ರಾಮ ಐತಿಹಾಸಿಕ ಸ್ಥಳವಾಗಿದ್ದು ಪ್ರವಾಸಿ ತಾಣ ಮಾಡುವ ಜತೆಗೆ ಗುಡ್ಡದಿಂದ ಕರಡಿ ಚಿರತೆ ಕಾಡು ಪ್ರಾಣಿಗಳು ಗ್ರಾಮಕ್ಕೆ ಬರುತ್ತಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ ಇದರ ರಕ್ಷಣೆ ಅಗತ್ಯ ಕ್ರಮಕೈಗೊಳ್ಳುವಂತೆ ನನ್ನಿವಾಳ ಗ್ರಾಮಪಂಚಾಯಿತಿ ಸದಸ್ಯ ಮನವಿ ಮಾಡಿಕೊಂಡರು.
ತಾಲೂಕಿ‌ನ ಗೋಪನಹಳ್ಳಿ ಹಾಗೂ ಚಿಕ್ಕೇನಹಳ್ಳಿ ಗ್ರಾಮದಲ್ಲಿ
ಅರಣ್ಯ ಇಲಾಖೆಗೆ ಸೇರಿದ ಭೂಮಿ ಒತ್ತುವರಿ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅರಣ್ಯ ಸಚಿವರ ಗಮನ ಸೆಳೆದಾಗ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪಹಣಿಯಲ್ಲಿ ಅರಣ್ಯ ಇಲಾಖೆ ಎಂದು ನಮುದಾಗಿದ್ದರೆ ಕೂಡಲೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದರು .
ನನ್ನಿವಾಳ ಗ್ರಾಮದಲ್ಲಿ ಕರಡಿ ಚಿರತೆ ಗಳಿಗೆ ಕಡಿವಾಣ ಹಾಕಲು ಹಾಗೂ ಪ್ರವಾಸಿ ತಾಣದ ಬಗ್ಗೆ ಮಾಹಿತಿ ಕಳಿಸಿದರೆ ಮಂಜುರಾತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗ. ಚಿತ್ರದುರ್ಗ.ಚಳ್ಳಕೆರೆ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.
ವೀರಶೈವ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಸನ್ಮಾನಿಸಿ ಗೌರವಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading