March 16, 2026
IMG-20260201-WA0230.jpg

**ಕೇಂದ್ರ ಬಜೆಟ್ – 2026
ಪ್ರತಿಕ್ರಿಯೆ**
ಇದು ಅಭಿವೃದ್ಧಿ ಕೇಂದ್ರಿತ ಬಜೆಟ್ ಅಲ್ಲ, ಚುನಾವಣೆ ದೃಷ್ಟಿಯಿಂದ ರೂಪಿಸಿದ ಬಜೆಟ್ ಎಂದು ಸ್ಪಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಿಗೆ ಬಜೆಟ್‌ನಲ್ಲಿ ಬಂಪರ್ ಘೋಷಣೆಗಳನ್ನು ನೀಡಲಾಗಿದೆ. ಆದರೆ ದೇಶದ ಮಧ್ಯಮ ವರ್ಗ ಹಾಗೂ ತೆರಿಗೆ ಪಾವತಿದಾರರ ಮೇಲೆ ಯಾವುದೇ ನಿಜವಾದ ಪರಿಹಾರ ನೀಡುವ ಪ್ರಯತ್ನ ಕಾಣುತ್ತಿಲ್ಲ.
ವಿಶೇಷವಾಗಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ತೆರಿಗೆ ಪಾವತಿದಾರರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಜೀವನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಧ್ಯಮ ವರ್ಗಕ್ಕೆ ಬಜೆಟ್ ಯಾವುದೇ ಭರವಸೆ ನೀಡಿಲ್ಲ.
ಇನ್ನು ಕರ್ನಾಟಕ ರಾಜ್ಯಕ್ಕೂ, ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆಗಳು ಅಥವಾ ವಿಶೇಷ ಅನುದಾನ ಘೋಷಣೆಯಾಗದಿರುವುದು ದೊಡ್ಡ ನಿರಾಶೆಯಾಗಿದೆ. ಅಭಿವೃದ್ಧಿ ಹಿನ್ನಲೆಯಲ್ಲಿ ಇರುವ ಜಿಲ್ಲೆಗಳ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾಗಿದೆ.
ಒಟ್ಟಾರೆ ಹೇಳಬೇಕಾದರೆ, ಈ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಎಸ್. ಲಕ್ಷ್ಮಣ
ಆರ್ಥಿಕ ಚಿಂತಕರು / ಆರ್ಥಿಕ ವಿಶ್ಲೇಷಕರು
📞 9448565687

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading