ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಪುರಸಭೆ ಹೊಸದುರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಹಾಗೂ ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘ (ರಿ) ಹೊಸದುರ್ಗ ಇವರ ಸಹಯೋಗದೊಂದಿಗೆ ಭಾನುವಾರ 12ನೇ ಶತಮಾನದ ಶರಣರ ವಚನ ಸಂರಕ್ಷಕ ಶ್ರೀ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಧಾನದಿಂದ ಕಲಾ ತಂಡಗಳೊಂದಿಗೆ ಶರಣ ಶ್ರೀ ವೀರ ಮಡಿವಾಳ ಮಾಚಿದೇವರ ಭಾವಚಿತ್ರ ಹಾಗೂ ಜಗದ್ಗುರು ಶ್ರೀ ಬಸವಮಾಚಿದೇವ ಸ್ವಾಮೀಜಿಗಳ ಭವ್ಯ ಮೆರವಣಿಗೆಗೆ ಸಮಾಜ ಸೇವಕ ಗೋಪಿಕೃಷ್ಣ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಮಧ್ಯಾನ್ಹ 1 ಗಂಟೆಯ ಸಮಯಕ್ಕೆ ಕಾರ್ಯಕ್ರಮದ ಮುಖ್ಯ ವೇದಿಕೆಯತ್ತ ಮೆರವಣಿಗೆ ಸಾಗಿ ಬಂದಿತು.
ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು ಕುಣಿತ ಮತ್ತು ವಿವಿಧ ಕಲಾ ತಂಡಗಳು ಮೇಳೈಸಿದವು. ಮಾಚಿದೇವರು, ಇನ್ನಿತರ ಮಹನೀಯರ ಬಾವುಟಗಳು ಮೆರವಣಿಯುದ್ದಕ್ಕೂ ರಾರಾಜಿಸಿದವು. ಪೂರ್ಣ ಕುಂಭಹೊತ್ತ ಮಹಿಳೆಯರು ಮತ್ತು ಯುವತಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಮೆರಗು ನೀಡಿದರು. ಕಲಾತಂಡಗಳ ವಾದ್ಯದ ಸದ್ದಿಗೆ ಯುವಕರು ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.
ಆರಂಭದಲ್ಲಿ ಮೆರವಣಿಗೆಗೆ ತರೀಕೆರೆಯ ಮಡಿವಾಳ ಸಮಾಜದ ಮುಖಂಡ ಗೋಪಿಕೃಷ್ಣ ಚಾಲನೆ ನೀಡಿದರು. ತಾಲೂಕು ಗೌರವಾಧ್ಯಕ್ಷ ಬಿ.ಆರ್.ರಾಮಕೃಷ್ಣ, ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಲೋಕೇಶ್ವರಪ್ಪ, ಸಂಘದ ಬಿ.ಎಲ್.ಗಂಗಾಧರ್, ಕಾರ್ಯದರ್ಶಿ ಬಿ.ಎಂ.ರಮೇಶ್, ಮಾಜಿ ಕಾರ್ಯದರ್ಶಿ ಎಂ.ಕೆ.ತಿಪ್ಪೇಸ್ವಾಮಿ, ಸಮಾಜದ ಹಿರಿಯ ಮುಖಂಡರುಗಳಾದ ರಂಗನಾಥ್ ಮತ್ತು ಮಲ್ಲೇಶಪ್ಪ ಸೇರಿದಂತೆ ತಾಲೂಕಿನ ಸಮಸ್ತ ಮಡಿವಾಳ ಬಂಧುಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
About The Author
Discover more from JANADHWANI NEWS
Subscribe to get the latest posts sent to your email.