March 16, 2026
IMG-20260201-WA0213.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ವೃದ್ಧಿಯಾಗಲು ಸಹಕಾರಿ ಯಾಗುತ್ತದೆ ಎಂದು ಪಟ್ಟಣದ ಶ್ರೀ ಭೈರವೇಶ್ವರ ಇಂಟರ್ ನ್ಯಾಷನಲ್ ಸ್ಕೂಲ್ ನ ಗೌರವಾಧ್ಯಕ್ಷ ಎಸ್.ಕೆ.ರಮೇಶ್ ಹೇಳಿದರು.

ಅವರು ಪಟ್ಟಣದ ಶ್ರೀ ಭೈರವೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪೋಷಕರುಗಳಿಗೆ ಆಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವಾಗ ಪೋಷಕರುಗಳು ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.

ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಮಾಡುವುದರ ಜೊತೆಗೆ ಪೋಷಕರುಗಳಿಗೂ ಕೂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅವರುಗಳನ್ನು ಕೂಡ ಶಾಲೆಯತ್ತ ಕರೆತರುವ ಕೆಲಸವನ್ನು ಮಾಡಲಾಗುತ್ತಿದೆ. ಇಂತಹ ಚಟುವಟಿಕೆಗಳಿಂದ ಶಾಲೆಯಲ್ಲಿ ನಡೆಯುವ ಎಲ್ಲಾ ಮಾಹಿತಿಗಳು ಕೂಡ ಪೋಷಕರುಗಳಿಗೆ ತಿಳಿಯಲಿದೆ ಅದರಿಂದ ಮಕ್ಕಳ ಕಲಿಕೆ ಜೊತೆಗೆ ಅವರ ಬೆಳವಣಿಗೆಯ ಬಗ್ಗೆಯೂ ಅರಿಯಲು ಸಾಧ್ಯವಾಗುತ್ತದೆ ಎಂದರು.

ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪೋಷಕರುಗಳು ತಪ್ಪದೇ ಪಾಲ್ಗೊಳ್ಳುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ತ್ರಿವೇಣಿ, ಸಂಯೋಜಕಿ ಅರ್ಪಿತ ಸೇನ್, ಮುಖ್ಯ ಶಿಕ್ಷಕಿ ಯಶಸ್ವಿನಿ, ಶಿಕ್ಷಕರಾದ ಚಾಂದಿನಿ, ಅರ್ಪಿತ, ಸುಪ್ರಿತ, ಹೀನಕೌಸರ್, ಪ್ರಜ್ವಲ್, ಮಂಜುನಾಥ್, ಪವಿತ್ರ, ಲಕ್ಷ್ಮಿ, ಪ್ರೀತಿ, ರುಚಿತ, ಮಾರುತಿ, ಆಫ್ರಿನ್ ತಾಜ್, ಹರ್ಷಿತ, ಯೋಗಾನಂದ, ಅಶ್ವಿನಿ, ಪೋಷಕರುಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading