ನಾಯಕನಹಟ್ಟಿ-: ಒಂದು ಸುಸಂಸ್ಕೃತಿ ದೇಶ ಕಟ್ಟಲು ಅಲ್ಲಿನ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಅಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವ ಗುರು ಸ್ಥಾನ ಅನನ್ಯ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್ ಸುರೇಶ್ ಹೇಳಿದರು.

ಶನಿವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್. ಆರ್. ಮಂಜುನಾಥ್ ನಿವೃತ್ತ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಶಿಕ್ಷಕ ಎಂಬುವುದ ಕೇವಲ ಒಂದು ಪದವಲ್ಲ ಬದಲಾಗಿ ಕಲ್ಲು ಎಂಬ
ಮೂರ್ತಿಯನ್ನು ಶಿಲೆಯಾನ್ನಾಗಿಸುವ ಶಕ್ತಿ ಈ ಶಿಕ್ಷಕನಿಗಿರುತ್ತದೆ. ಆದ್ದರಿಂದ ಗುರು ಸ್ಥಾನ ಬಹುದೊಡ್ಡದು ಅಂತಹ ಶಿಕ್ಷಕ ಎಚ್ ಆರ್ ಮಂಜುನಾಥ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ
ಎಂದರು.
ಈ ಸಂದರ್ಭದಲ್ಲಿ ನಲಗೇತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್.ಮುತ್ತಯ್ಯ ,
ವಿಶ್ವನಾಥ, ಚಳ್ಳಕೆರೆ ಶಿಕ್ಷಕರ ಸಂಘದ ಅಧ್ಯಕ್ಷೆ ಸಣ್ಣ ಸೂರಮ್ಮ, ಮೊಳಕಾಲ್ಮೂರು ತಾಲೂಕು ಅಧ್ಯಕ್ಷೆ ಮಮತಾ, ನಿವೃತ್ತ ಶಿಕ್ಷಕ ಸಿ.ಬಿ. ಉಮೇಶ್, ಸಿ .ಆರ್. ಪಿ ಗಳಾದ ಎಚ್. ಜಗನ್ನಾಥ, ಪಾಲಯ್ಯ, ನಲಗೇತನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಎಸ್.ಸುರೇಶ್, ನಗರಸಭೆ ಸದಸ್ಯರಾದ ರಾಘವೇಂದ್ರ, ಶಿಕ್ಷಕರಾದ
ನಗರದ ರೋಟರಿ ಬಾಲಭವನದಲ್ಲಿ ನಡೆದ ಪ್ರೌಢಶಾಲಾ
ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.
ಶ್ರೀನಿವಾಸ್, ಸಿಟಿ ವೀರೇಶ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.