ಚಳ್ಳಕೆರೆ ವೈದ್ಯ ವೃತ್ತಿಯ ಸಾರ್ಥಕತೆ ಗುಣಮುಖರಾದ ರೋಗಿಯ ಮುಖದಲ್ಲಿರುವ ನಗುವಿನಲ್ಲಿರುತ್ತದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಬಸವೇಶ್ವರ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳು ಇಂದು ನಲಕೇತನಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ವೈದ್ಯೋ ನಾರಾಯಣ ಹರಿ ಎಂದು ವೈದ್ಯರನ್ನು ಸಮಾಜ ಗು ರಿಸುತ್ತದೆ ಹಲವಾರು ಸವಾಲುಗಳನ್ನು ಮೆಟ್ಟಿಯು ಕೂಡ ವೈದ್ಯರು ತಮ್ಮ ನಿಸ್ವಾರ್ಥ ಸೇವೆ ಸಮಾಜಕ್ಕೆ ನೀಡುತ್ತಿದ್ದಾರೆ ಔಷಧಿಗಳು ಕಾಯಿಲೆಯನ್ನು ಗುಣಪಡಿಸಿದರೆ ವೈದ್ಯರು ರೋಗಿಗಳನ್ನು ಒಳಪಡಿಸುತ್ತಾರೆ ಭಾವನಾತ್ಮಕವಾದ ಮತ್ತು ಆತ್ಮಸ್ಥೈರ್ಯದ ಸಂಬಂಧ ವೈದ್ಯ ಮತ್ತು ರೋಗಿಯಲ್ಲಿ ಅಡಗಿದೆ ಔಷಧಿಗಿಂತ ವೈದ್ಯರ ಕಿಚ್ಚಾ ಕ್ರಮ ಕಾಯಿಲೆಗಳು ಗುಣವಾಗಲು ಅತಿ ಮುಖ್ಯವಾಗುತ್ತದೆ ಹಿಂದುಳಿದಂತ ಇಂತಹ ಗ್ರಾಮಗಳಲ್ಲಿ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ ವೈದ್ಯರುಗಳು ಬಂದು ಊಟ ಉಪಚಾರ ಮತ್ತು ಮತ್ತಿತರ ಸೌಲಭ್ಯಗಳಿಲ್ಲದೆ ಇಂತಹ ಮುಗ್ಧ ರೋಗಿಗಳ ಸೇವೆ ಮಾಡುತ್ತಿರುವುದು ಅವರುಗಳ ನಿಸ್ವಾರ್ಥತೆಗೆ ಹಿಡಿದ ಕೈಗನ್ನಡಿಯಾಗಿದೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವಂತಹ ವೈದ್ಯರು ಅಧಿಕಾರಿಗಳು ವಕೀಲರು ಮತ್ತು ಜನಪ್ರತಿನಿಧಿಗಳ ಅವಶ್ಯಕತೆ ಇಂದಿನ ಸಮಾಜಕ್ಕಿದೆ ಈ ದಿಕ್ಕಿನಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜಿನ ವೈದ್ಯರು ಮತ ಎಲ್ಲ ಸಿಬ್ಬಂದಿಗಳಿಗೆ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು
ನಲಗೇತನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಮುತ್ತಯ್ಯ ಬಸವೇಶ್ವರ ಮೆಡಿಕಲ್ ಕಾಲೇಜಿನ ವೈದ್ಯ ಅಧಿಕಾರಿಗಳಾದ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು




About The Author
Discover more from JANADHWANI NEWS
Subscribe to get the latest posts sent to your email.