December 14, 2025
IMG-20250131-WA0082.jpg

ಚಳ್ಳಕೆರೆ: ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ಬಜೆಟ್ ಮಂಡನೆಒಐಡ್ಡ ಸಭೆಯಲ್ಲಿ ನಗರ ಸಭೆ ಅಧ್ಯಕ್ಷೆ ಜೈತುನ್ ಬೀ ರವರ ಒಪ್ಪಿಗೆ ಮೇರೆಗೆ ಸ್ಥಾಯಿಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ 75.60 ಲಕ್ಷ ಉಳಿತಾಯ ಬಜೆಟ್ ಮಂಡಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸರ್ಕಾರದಿಂದ ಒಟ್ಟು1355.50ಲಕ್ಷ ಮತ್ತು ನಗರಸಭೆ ಆದಾಯ 1608.00 ಲಕ್ಷ ನಿರೀಕ್ಷಿಸಲಾಗಿದ್ದು ಸಾರ್ವಜನಿಕ ಆರೋಗ್ಯಕ್ಕೆ 48 ಲಕ್ಷ ಜನ ತ್ಯಾಜ್ಯ ವಸ್ತು ನಿರ್ವಹಣೆಗೆ 164.50 ಲಕ್ಷ ನೀರು ಸರಬರಾಜು ವ್ಯವಸ್ಥೆಗೆ 185 ಲಕ್ಷ

ನಗರಸಭೆ ವ್ಯಾಪ್ತಿಯ ಶಿಶು ವಿಹಾರ ಪಾರ್ಕ್ ನಿರ್ಮಾಣಕ್ಕೆ 40 ಲಕ್ಷ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಲ್ಯಾಣ ನಿಧಿಗೆ 60 ಲಕ್ಷ  ಇತರೆ ವರ್ಗದ ಕಲ್ಯಾಣ ನಿಧಿಗೆ 35 ಲಕ್ಷ ಅಂಗವಿಕಲರ ಕಲ್ಯಾಣ ನಿಧಿಗೆ 25 ಲಕ್ಷ ಕ್ರೀಡಾ ಕಲ್ಯಾಣ 5ಲಕ್ಷ ಚಿತ್ರದುರ್ಗ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಗ್ರಿಲ್ ಅಳವಡಿಕೆಗೆ100 ಲಕ್ಷ ರೈಲ್ವೆ ಗೇಟ್ ಬಳಿ ರಾಜಕಾಲುವೆ ಹಳ್ಳಕ್ಕೆ ಬ್ಯಾರಿಕೇಡ್ ನಿರ್ಮಾಣಕ್ಕೆ 20.00 ಲಕ್ಷ ಮೀಸಲಿಡಲಾಗಿದೆ.

ಆದಾಯದ ಒಟ್ಟು ವೆಚ್ಚದಲ್ಲಿ ರಾಜಸ್ವ ಪಾವತಿ 2903 ಬಂಡವಾಳ ಪಾವತಿ 3509.50 ಅಸಾಮಾನ್ಯ ಖಾತೆ ಪಾವತಿ 1203 2025-26ನೇ ಸಾಲಿನ ನಗರಸಭೆ ಕರಡು ಆಯವ್ಯಯ ಒಟ್ಟು ಪಾವತಿಯ ಮೊತ್ತ 7615.50 ಆಗಿದ್ದು 2025-26ನೇ ಸಾಲಿನ ನಗರಸಭೆ ಕರಡು ಆಯವ್ಯಯ ಉಳಿತಾಯ ಮೊತ್ತ ರೂ 75.60 ಲಕ್ಷಗಳಾಗಿವೆ ಎಂದು ತಿಳಿಸಿದರು.

ಸಭೆಯಲ್ಲಿ ಮಾರ್ದನಿಸಿದ ಮಾಜಿ ನಗರಸಭಾ ಸದಸ್ಯ ಗೋವಿಂದರಾಜು ಕರ ಪತ್ರ: ಶುಕ್ರವಾರ ಬೆಳಗ್ಗೆ ದಿನ ಪತ್ರಿಕೆಗಳ ಸರಬರಾಜು ವೇಳೆ ಕಳೆದ 30 ವರ್ಷಗಳಿಂದ ನಗರಸಭೆಯ ಮಳಿಗೆಗಳ ಬಾಡಿಗೆ ವಸೂಲಿಯಾಗಿಲ್ಲ ಎಂದು ಆರೋಪಿಸಿ ಕರಪತ್ರಗಳನ್ನು ಹಂಚಿದ್ದರು ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ರಮೇಶ್ ಗೌಡ ಸೇರಿದಂತೆ ಹಲವರು ಈ ಕುರಿತು ಚರ್ಚಿಸಲು ಸೋಮವಾರದ ಒಳಗೆ ತುರ್ತು ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಪೌರಾಯುಕ್ತ ಜಗರೆಡ್ಡಿ ಅವರಿಗೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಜಗರೆಡ್ಡಿ ಮುಂದಿನ ಸಭೆಯಲ್ಲಿ ಮಳಿಗೆಗಳ ವಿಚಾರದಲ್ಲಿ ನ್ಯಾಯಾಲಯದ ಆದೇಶದ ಮಾಹಿತಿ ಮತ್ತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಅನ್ನು ಅನುಮೋದಿಸಲಾಯಿತು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜೈ ತುನ್ ಬಿ ಉಪಾಧ್ಯಕ್ಷೇ ಸುಮಾ ಬರಮಯ್ಯ ವೀರಭದ್ರಪ್ಪ ಎಂ ಜೆ ರಾಘವೇಂದ್ರ ಶ್ರೀನಿವಾಸ್ ವಿಶುಕುಮಾರ್ ಜಯಣ್ಣ ತಿಪ್ಪಮ್ಮ ನಿರ್ಮಲ ನಾಗವೇಣಿ ಕವಿತಾ ಬೋರಯ್ಯ ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಜೆಟ್ ಮಂಡನೆ ಕೇವಲ ಪುಸ್ತಕಕ್ಕೆ ಸೀಮಿತವಾಗದೆ ನಗರದ ಅಭಿವೃದ್ಧಿಗೆ ಒತ್ತು ನೀಡಬೇಕು ಬಜೆಟ್ ನಲ್ಲಿ ಮಂಡನೆಯಾಗಿರುವ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು.

ಜಯಲಕ್ಷ್ಮಿ ಕೃಷ್ಣಮೂರ್ತಿ

ನಗರಸಭೆ ಸದಸ್ಯೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading